ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿರುವ ಬೆಟ್ಟದ ಮೇಲೆ ಚಂದ್ರಮೌಳೇಶ್ವರ ದೇವಾಲಯ ಇದೆ. ಈ ದೇವಸ್ಥಾನದಲ್ಲಿ ಹಿಂದೆ ಹಲವು ಶುಭ ಕಾರ್ಯಗಳು, ಮದುವೆಗಳು ಇತರೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈಗ ಅಲ್ಲಿ ಯಾವುದೇ ರೀತಿಯ ಸಮಾರಂಭಗಳು ನಡೆಯುತ್ತಿಲ್ಲ.
ಹಾಗಾಗಿ ಈ ಬೆಟ್ಟದ ಸುತ್ತಲೂ ಗಿಡ – ಗಂಟೆಗಳು ಬೆಳೆದಿದ್ದು, ಮಕ್ಕಳು, ಸಾರ್ವಜನಿಕರು ಓಡಾಡುವುದಕ್ಕೂ ಹೆದರುವಂತಾಗಿದೆ. ಅಲ್ಲದೆ, ಚಿರತೆಗಳ ಹಾವಳಿ ಕೂಡ ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ದೇವಾಲಯ ಮತ್ತು ಬೆಟ್ಟವನ್ನು ಮುಜರಾಯಿ ಇಲಾಖೆ ಅಧೀನಕ್ಕೆ ಪಡೆದು ಅಭಿವೃದ್ಧಿಪಡಿಸಬೇಕು. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಇಲ್ಲಿಗೆ ಪ್ರವಾಸಿಗರು ಬರುವಂತಾದರೆ ಸರ್ಕಾರಕ್ಕೂ ಆದಾಯ ಲಭಿಸುತ್ತದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.





