ಮೈಸೂರಿನ ಕುವೆಂಪು ನಗರದ ಕಾಂಪ್ಲೆಕ್ಸ್ ಮತ್ತು ರಾಮಕೃಷ್ಣ ವೃತ್ತದ (ಆಂದೋಲನ ಸರ್ಕಲ್) ನಡುವಿನ ರಾಯಲ್ ಎನ್‌ಫೀಲ್ಡ್ ಶೋ ರೂಂ, ಗಿರಿಯಾಸ್ ಮತ್ತು ಅಪೋಲೋ ಫಾರ್ಮ್ ಬಳಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ಇಲ್ಲಿ ಸಿಗ್ನಲ್ ವ್ಯವಸ್ಥೆ ಹಾಗೂ ಯಾವುದೇ ಸಂಚಾರ ಪೊಲೀಸ್ ಸಿಬ್ಬಂದಿ ಇಲ್ಲದಿರುವ ಕಾರಣ ಟ್ರಾಫಿಕ್ ಸಮಸ್ಯೆ ಕಾಡುತ್ತಿದ್ದು, ಆಗಿಂದಾಗ್ಗೆ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇವೆ. ವಿವೇಕಾನಂದ ನಗರ, ಕುವೆಂಪು ನಗರ ಮತ್ತು ರಾಮಕೃಷ್ಣ ನಗರಕ್ಕೆ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಆದ್ದರಿಂದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಈ ಸ್ಥಳದಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





