Mysore
26
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಓದುಗರ ಪತ್ರ: ದಸರಾ ಕ್ರೀಡೆಗಳ ಆಯೋಜನೆ ವ್ಯವಸ್ಥಿತವಾಗಿರಲಿ

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ “ಸಿಎಂ ಕಟ್’ ದಸರಾ ಕ್ರೀಡಾಕೂಟವು ಇತ್ತೀಚಿನ ವರ್ಷಗಳಲ್ಲಿ ವ್ಯವಸ್ಥಿತವಾಗಿ ಆಯೋಜನೆಯಾಗದ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ. ಸೆ.26 ಮತ್ತು 27ರಂದು ಜಿಲ್ಲಾ
ದಸರಾ ಕ್ರೀಡಾಕೂಟ ಮಟ್ಟದ ದಸರಾ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜನೆಯಾಗಿತ್ತು. ಇಲ್ಲಿ ವಿಜೇತರಾದವರು ವಿಭಾಗೀಯ ಮಟ್ಟದ ಕ್ರೀಡಾಕೂಟಲ್ಲಿ ಭಾಗವಹಿಸಬೇಕಿತ್ತು. ಆದರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮುಗಿದ ಮರುದಿನವೇ ಜಿಲ್ಲಾ ಮಟ್ಟದ ಕ್ರೀಡಾಕೂಟ, ಜಿಲ್ಲಾ ಮಟ್ಟದ ಕ್ರೀಡಾಕೂಟ ಮುಗಿದ ಮರುದಿನವೇ ವಿಭಾಗೀಯ ಮಟ್ಟದ ಕ್ರೀಡಾ ಕೂಟವನ್ನು ಆಯೋಜನೆ ಮಾಡಿದರೆ ಸತತವಾಗಿ ಕ್ರೀಡಾ ಪಟುಗಳು ಕ್ರೀಡೆಯಲ್ಲಿ ಭಾಗವಹಿಸುವುದಾದರೂ ಹೇಗೆ? ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ದಸರಾ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದೆ.

ದಸರಾಗೂ ಒಂದು ತಿಂಗಳ ಮುನ್ನವೇ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟಗಳನ್ನು ಮುಗಿಸಿಕೊಂಡರೆ ಕ್ರೀಡಾಪಟುಗಳು ಕೊಂಚ ಬ್ರೇಕ್ ಪಡೆದು ವಿಭಾಗೀಯ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ತಯಾರಾಗಲು ಸಾಧ್ಯವಾಗುತ್ತದೆ. ಸೆ.27ಕ್ಕೆ ಜಿಲ್ಲಾ ಮಟ್ಟದ ಕ್ರೀಡಾಕೂಟ ಮುಗಿಸಿ ಸೆ.28ಕ್ಕೆ ವಿಭಾಗೀಯ ಮಟ್ಟದ ಕ್ರೀಡಾಕೂಟಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣಿಸಿ ಭಾಗದಹಿಸಬೇಕು ಎಂದರ ಕ್ರೀಡಾಪಟುಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಮುಂದಿನ ಬಾರಿಯಾದರೂ ದಸರಾ ಕ್ರೀಡಾಕೂಟಗಳ ಬಗ್ಗೆ ಸಂಬಂಧಪಟ್ಟ ಇಲಾ ಖೆಯು ಆಸಕ್ತಿವಹಿಸಿ ವ್ಯವಸ್ಥಿತವಾಗಿ ಆಯೋಜನೆ ಮಾಡುವಂತಾಗಲಿ.
-ಪ್ರಶಾಂತ್, ಎಚ್.ಡಿ.ಕೋಟೆ ತಾ

Tags: