ಮೈಸೂರಿನ ರಾಮಾನುಜ ರಸ್ತೆ, ಜೆಎಸ್‌ಎಸ್ ಆಸ್ಪತ್ರೆ, ಅಗ್ರಹಾರ ವೃತ್ತವನ್ನು ಸಂಪರ್ಕಿಸುವ ಸರ್ಕಲ್(ಪಾತಾಳ ಆಂಜನೇಯಸ್ವಾಮಿ ದೇವಾಲಯದ ಸಮೀಪ) ಮೋರಿಗೆ ಡಕ್ ನಿರ್ಮಾಣ ಕಾರ್ಯ ಇತ್ತೀಚೆಗೆ ಪೂರ್ಣಗೊಂಡಿದೆ. ಕಾಮಗಾರಿ ಮುಗಿದ ನಂತರ ರಸ್ತೆಗೆ ಜಲ್ಲಿ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಕಲ್ಲುಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಟೈರ್‌ಗಳು ಹಾಳಾಗುತ್ತವೆ. ಕೆಲವೊಮ್ಮೆ ವಾಹನಗಳ ಟೈರ್‌ಗೆ ಸಿಲುಕುವ ಕಲ್ಲುಗಳು ಸಿಡಿದು ಸಾರ್ವಜನಿಕರು ಗಾಯಗೊಂಡಿದ್ದಾರೆ. ಸಂಬಂಧಪಟ್ಟವರು ಕೂಡಲೇ ರಸ್ತೆಗೆ ಡಾಂಬರು ಹಾಕುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಕ್ರಮಕೈಗೊಳ್ಳಬೇಕಾಗಿದೆ.
-ಗಣೇಶ್, ರಾಮಾನುಜ ರಸ್ತೆ, ಮೈಸೂರು





