Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಓದುಗರ ಪತ್ರ: ಹುಲಿ ಹಾವಳಿಗೆ ಕಡಿವಾಣ ಹಾಕಿ

ಸರಗೂರು ತಾಲ್ಲೂಕಿನ ಹೆಗ್ಗನೂರು ಗ್ರಾಮದಲ್ಲಿ ಕಳೆದ 2-3 ತಿಂಗಳುಗಳಿಂದ ಹುಲಿಯೊಂದು ಆಗಾಗ್ಗೆ ದಾಳಿ ನಡೆಸಿ ಹಸುಗಳನ್ನು ಬಲಿ ಪಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕೆಲ ದಿನಗಳ ಹಿಂದಷ್ಟೇ ಎಚ್.ಮಹದೇವೇಗೌಡ ಎಂಬವರು ಜಮೀನಿನಿಂದ ಮನೆಗೆ ಹಸುಗಳನ್ನು ಹಿಡಿದು ಕೊಂಡು ಹೋಗುವಾಗ ಹುಲಿ ದಾಳಿ ನಡೆಸಿ ಹಸುವನ್ನು ಕೊಂದುಹಾಕಿತ್ತು. ಈ ಘಟನೆಯಿಂದಾಗಿ ಗ್ರಾಮಸ್ಥರು ಜಮೀನುಗಳಿಗೆ ಹೋಗಲು ಹೆದರು ವಂತಾಗಿದ್ದು, ಕಳೆದ 3 ತಿಂಗಳುಗಳಿಂದ ಆಗಾಗ್ಗೆ ದಾಳಿ ಮಾಡುತ್ತಿರುವ ಈ ಹುಲಿ ಈವರೆಗೂ 8-10 ಜಾನುವಾರುಗಳನ್ನು ಬಲಿ ಪಡೆದಿದೆ. ಪ್ರತಿಬಾರಿಯೂ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂದು ಮಹಜರು ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡುವ ಜತೆಗೆ ಕ್ಯಾಮೆರಾಗಳನ್ನು ಅಳವಡಿಸಿ ಹೋಗುತ್ತಾರೆಯೇ ವಿನಾ ಹುಲಿ ಸೆರೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಭಾಗದ ರೈತರು ಮುಂಜಾನೆಯ ನಸುಕಿನಿಂದ ಹಿಡಿದು ಸಂಜೆ ಕತ್ತಲು ಆವರಿಸುವವರೆಗೂ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಈ ವೇಳೆ ಅನೇಕರಿಗೆ ಹುಲಿ ಕಾಣಿಸಿಕೊಂಡಿದೆ. ಈಗ ಹಸುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿ ಮುಂದೆ ಜನರ ಮೇಲೂ ದಾಳಿ ಮಾಡಿದರೆ ಯಾರು ಹೊಣೆ? ಆದ್ದರಿಂದ ಅರಣ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಸೆರೆಗೆ ಕ್ರಮವಹಿಸಬೇಕಿದೆ.
-ಚೇತನ್ ಕುಮಾರ್, ಸರಗೂರು ತಾ.

Tags: