ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಅಲ್ಲಿದ್ದ ಹುಡುಗರನ್ನು ಏಕೆ ಇಷ್ಟು ಸಂಖ್ಯೆಯಲ್ಲಿ ಸೇರಿದ್ದೀರಿ ? ಯಾರಿಗಾಗಿ ಕೊಡಲು ಈ ಖರೀದಿ ಎಂದಾಗ ಕ್ರಿಸ್ ಮಸ್ ಹಬ್ಬಕ್ಕಾಗಿ ಫ್ರೆಂಡ್ಸ್ ಹಾಗೂ ನಮ್ಮ ಶಿಕ್ಷಕರಿಗೆ ಗಿಫ್ಟ್ ಖರೀದಿಸಲು ಬಂದಿದ್ದೇವೆ ಎಂದರು. ಇದು ಒಳ್ಳೆಯ ಬೆಳವಣಿಗೆ. ಆದರೆ ಬೇರೆ ಎಲ್ಲಾ ಉಡುಗೊರೆಗಳ ಬದಲು ಪುಸ್ತಕವನ್ನು ನೀಡಿದರೆ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ.
ಪುಸ್ತಕಗಳನ್ನು ಓದುವವರ ಸಂಖ್ಯೆಯೇ ವಿರಳವಾಗುತ್ತಿರುವಾಗ ಶಾಲೆಗಳಲ್ಲಿ ಮಕ್ಕಳಿಗೆ ಕಥೆ , ಕಾದಂಬರಿ, ಅನುಭವ ಕಥನ ಹೀಗೆ ಮಕ್ಕಳ ನೈತಿಕ ಬೆಳವಣಿಗೆಗೆ ಪೂರಕವಾಗುವಂತಹ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಇಂಬು ನೀಡಿದಂತಾಗುತ್ತದೆ. ಮಕ್ಕಳು ಪಠ್ಯದ ಜೊತೆಗೆ ಇತರ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಂತಾಗುತ್ತದೆ.
-ಎಂ.ಜೆ.ರುದ್ರಮೂರ್ತಿ, ಚಿತ್ರದುರ್ಗ





