ಮೈಸೂರಿನ ಕೆ.ಆರ್. ಆಸ್ಪತ್ರೆಯ ಕಲ್ಲು ಬಿಲ್ಡಿಂಗ್ ಬಳಿ ಕೋತಿಗಳ ಹಾವಳಿ ಮಿತಿ ಮೀರಿದ್ದು, ರೋಗಿಗಳ ಸಂಬಂಧಿಕರು ತರುವ ಊಟ, ತಿಂಡಿ ಹಾಗೂ ಹಣ್ಣಿನ ಬ್ಯಾಗ್ ಗಳನ್ನು ಕೋತಿಗಳು ಕಿತ್ತುಕೊಂಡು ಹೋಗುತ್ತವೆ. ದೂರದ ಊರುಗಳಿಂದ ಬರುವ ರೋಗಿಗಳ ಸಂಬಂಧಿಕರು ಕೋತಿಗಳ ಹಾವಳಿಯಿಂದ ಪರದಾಡುವಂತಾಗಿದೆ.
ಕೆಲವರ ಬಳಿ ಮತ್ತೆ ಊಟ ಹಾಗೂ ಹಣ್ಣು ಖರೀದಿಸಲು ಹಣವೂ ಇಲ್ಲದಿರುವುದರಿಂದ ಉಪವಾಸದಿಂದ ಬಳಲ ಬೇಕಾಗುತ್ತದೆ. ಆಸ್ಪತ್ರೆಯ ಆಡಳಿತಾಧಿಕಾರಿಗಳು ಕೂಡಲೇ ಆಸ್ಪತ್ರೆಯ ಆವರಣದಲ್ಲಿರುವ ಕೋತಿಗಳನ್ನು ಹಿಡಿದು ನಗರದ ಹೊರ ಪ್ರದೇಶಕ್ಕೆ ಸಾಗಿಸಲು ಕ್ರಮ ಕೈಗೊಳ್ಳಬೇಕು.
ಸಿದ್ದಲಿಂಗೇಗೌಡ,ಹೈರಿಗೆ, ಎಚ್. ಡಿ. ಕೋಟೆ ತಾ.





