ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ನೇರ ಪ್ರಸಾರ ಮಾಡಿದ ಚಂದನ ವಾಹಿನಿ ತನ್ನ ಅತ್ಯುತ್ತಮ ವೀಕ್ಷಕ ವಿವರಣೆಯಿಂದಾಗಿ ಪ್ರೇಕ್ಷಕರ ಮನ ಗೆದ್ದಿದೆ. ಇದು 69ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪ್ರಸಾರವಾಗಿದೆ. ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಿದ ಪ್ರೊ. ಮಾದೇವ ಭರಣಿ ಮತ್ತು ಸವಿ ಪ್ರಕಾಶ್ ರವರು ಮೆರವಣಿಗೆಯಲ್ಲಿ ಸಾಗಿದ 2,000 ಮಂದಿ ಕಲಾವಿದರು, 140 ಕಲಾ ತಂಡಗಳು ಹಾಗೂ 52 ಸ್ತಬ್ಧಚಿತ್ರಗಳ ವಿವರಣೆ ಜತೆಗೆ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತೂ ವೀಕ್ಷಕರಿಗೆ ಮನಮುಟ್ಟುವಂತೆ ವಿವರಿಸಿದರು.
ಕರ್ನಾಟಕ-50ನ್ನು ಸಮಯೋಜಿತವಾಗಿ ಘಟನಾವಳಿ ಸಹಿತ ವಿವರಿಸಿ ನಾಡಿನ ಜನಮನವನ್ನು ಗೆದ್ದಿದ್ದಾರೆ. ಇದಕ್ಕಾಗಿ ದೂರದರ್ಶನ ಚಂದನ ವಾಹಿನಿಗೆ ತುಂಬು ಹೃದಯದ ಅಭಿನಂದನೆಗಳು,
-ವಿ.ಗಂಗಾಧರ, ಚಾಮರಾಜನಗರ