ಇತ್ತೀಚಿನ ದಿನಗಳಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ದರ್ಪದಿಂದ ವರ್ತಿಸಿ ಹಲ್ಲೆ ಮಾಡಿರುವುದು ವರದಿಯಾದ ಹಿನ್ನೆಲೆಯಲ್ಲಿ ರಾಜ್ಯದ ಡಿಜಿ ಮತ್ತು ಐಜಿಪಿ ಡಾ. ಎಂ.ಎ.ಸಲೀಂ ಅವರು ಸಹನೆ, ಸೌಜನ್ಯ ಹಾಗೂ ಘನತೆಯಿಂದ ವರ್ತಿಸುವಂತೆ ಪೊಲೀಸರಿಗೆ ಮಹತ್ವದ ಸುತ್ತೋಲೆ ಹೊರಡಿಸಿರುವುದು ಶ್ಲಾಘನೀಯ. ಪೊಲೀಸರು ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯಿಂದ ಕೆಲಸ ಮಾಡು ವುದರಿಂದ ಪೊಲೀಸ್ ಇಲಾಖೆಯ ಘನತೆ ಹೆಚ್ಚಿಸಿ ಸಮಾಜದಲ್ಲಿ ಗೌರವ ಮೂಡುವಂತೆ ಮಾಡುತ್ತದೆ ಎಂದು ಸುತ್ತೋಲೆ ಹೊರಡಿಸಿ ಪ್ರಬುದ್ಧತೆ ಮೆರೆದಿರುವುದು ಸ್ವಾಗತಾರ್ಹ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





