ಮೈಸೂರಿನ ಕೆಆರ್‌ಎಸ್ ಮುಖ್ಯರಸ್ತೆಯ ರಾಮಕೃಷ್ಣ ಅಧ್ಯಾತ್ಮ ಕೇಂದ್ರದ ಪಾದಚಾರಿ ಮಾರ್ಗದ ಬಳಿ ಟೀಮ್ ಮೈಸೂರು ತಂಡದವರು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ. ಆದರೆ ರೈಲ್ವೆ ವಸತಿ ನಿಲಯದ ಜಾಗದಲ್ಲಿ ಪಾದಚಾರಿ ಮಾರ್ಗದ ಬಳಿ ನಿತ್ಯ ಕಸ ಸುರಿಯಲಾಗುತ್ತಿದೆ. ಗಿಡಗಳ ಬಳಿ ಕಸ ಸುರಿಯದಂತೆ ಕ್ರಮ ವಹಿಸಬೇಕು ಎಂದು ರೈಲ್ವೆ ಇಲಾಖೆ ವ್ಯವಸ್ಥಾಪಕರ ಗಮನಕ್ಕೆ ತಂದರೂ ಕಸ ಸುರಿಯುವುದು ನಿಂತಿಲ್ಲ. ಹಾಗಾಗಿ ಸಂಬಂಧಪಟ್ಟ ನಗರಪಾಲಿಕೆಯ ಆರೋಗ್ಯ ಅಧಿಕಾರಿಗಳು ಗಮನ ಹರಿಸಿ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳ ಬೇಕಾಗಿದೆ.
– ಶ್ರೀಕಂಠ ಮೂರ್ತಿ, ಮೈಸೂರು





