Mysore
14
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಓದುಗರ ಪತ್ರ| ಬೀಳುವ ಹಂತದಲ್ಲಿರುವ ಮರ ತೆರವುಗೊಳಿಸಿ

ಮೈಸೂರಿನ ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಸಮೀಪದ ಬಸ್ ನಿಲ್ದಾಣದ ಪಕ್ಕದಲ್ಲಿನ ಮರವೊಂದು ಬೀಳುವ ಹಂತದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಈ ಮರದ ಬುಡ ಗೆದ್ದಲು ಹಿಡಿದಿದ್ದು, ಗಾಳಿ ಬೀಸಿದಂತೆಲ್ಲ ಮರ ಅಲುಗಾಡುತ್ತಿದೆ. ಈಗ ಮಳೆಗಾಲವಾದ್ದರಿಂದ ಮರ ಬೀಳುವ ಅಪಾಯದಲ್ಲಿದೆ.

ಈ ಮರದ ಕೆಳಗೆ ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುತ್ತಿರುತ್ತಾರೆ.

ಕೆಲವರು ಅಲ್ಲಿಯೇ ನಿಂತಿದ್ದು, ಬಸ್ ಹತ್ತುತ್ತಾರೆ. ಈ ವೇಳೆ ಮರವೇನಾದರೂ ಧರೆಗುರುಳಿ ಅನಾಹುತ ಸಂಭವಿಸಿದರೆ ಯಾರು ಹೊಣೆ? ಅರಣ್ಯ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆಯವರು ಈ ಮರವನ್ನು ತೆರವುಗೊಳಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕು.

-ಬಾಲಸುಬ್ರಹ್ಮಣ್ಯ, ಕುವೆಂಪುನಗರ, ಮೈಸೂರು.

Tags:
error: Content is protected !!