ಮೈಸೂರು ನಗರದ ಇರ್ವಿನ್ ರಸ್ತೆಯಲ್ಲಿ ಸಾಲು-ಸಾಲಾಗಿ ಫರ್ನಿಚರ್ಸ್ ಅಂಗಡಿಯವರು ತಮ್ಮ ಅಂಗಡಿಯ ಫರ್ನಿಚರ್ಸ್‌ಗಳನ್ನು ಫುಟ್‌ಪಾತ್‌ಗಳ ಮೇಲೆ ಜೋಡಿಸಿರುವುದರಿಂದ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ. ರಸ್ತೆ ಬದಿಯಲ್ಲಿ ಸಾಲಾಗಿ ಕಾರುಗಳನ್ನು ನಿಲ್ಲಿಸಿರುವುದರಿಂದ ಅತ್ತ ಫುಟ್‌ಪಾತ್ ಇಲ್ಲದೇ ಇತ್ತ ರಸ್ತೆಯ ಬದಿಯಲ್ಲಿ ನಡೆಯಲೂ ಆಗದೆ ಪಾದಚಾರಿಗಳು ರಸ್ತೆಗಿಳಿದು ನಡೆಯುವುದು ಅನಿವಾರ್ಯವಾಗಿದ್ದು, ಈ ಸಂದರ್ಭದಲ್ಲಿ ಅಪಘಾತವಾದರೆ ಯಾರು ಹೊಣೆ ಎಂಬಂತಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಇರ್ವಿನ್ ರಸ್ತೆಯಲ್ಲಿ ಫರ್ನಿಚರ್ ಅಂಗಡಿಯವರಿಂದ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಎಂ.ಎನ್.ಧರಣಿ ವೆಂಕಟೇಶ, ಮೈಸೂರು



