ಮೈಸೂರಿನ ಜೆ.ಪಿ.ನಗರದ ಸಾಯಿಬಾಬಾ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ೧೭ನೇ ಮುಖ್ಯರಸ್ತೆಯಲ್ಲಿರುವ ಜೆ.ಪಿ.ನಗರ ೩ನೇ ಹಂತ, ೮ನೇ ಕ್ರಾಸ್ ಎಂಬ ಮಾರ್ಗಸೂಚಿ ಫಲಕದ ಪಕ್ಕದಲ್ಲಿ ನಾಲ್ಕು ಸಾಲು ಮರಗಳಿದ್ದು, ಈ ಮರಗಳ ಕೊಂಬೆಗಳು ವಿಶಾಲವಾಗಿ ಹರಡಿಕೊಂಡಿವೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಕೊಂಬೆಗಳು ತಗಲುತ್ತವೆ. ಸಂಬಂಧಪಟ್ಟ ಅಧೀಕಾರಿಗಳು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಡಚಣೆಯಾಗುತ್ತಿರುವ ಮರದ ಕೊಂಬೆಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ.
-ಕೆ.ಎನ್.ಅಶ್ವತ್ಥನಾರಾಯಣ, ಜೆ.ಪಿ.ನಗರ, ಮೈಸೂರು





