ಮೈಸೂರಿನ ವಿವೇಕಾನಂದನಗರದಿಂದ ಶ್ರೀರಾಂಪುರ ಎರಡನೇ ಹಂತದ ಕಡೆಗೆ ತೆರಳುವ ಮುಖ್ಯರಸ್ತೆಯಲ್ಲಿ (ವಿವೇಕಾನಂದನಗರ ವೃತ್ತದ ಬಳಿ) ಗುರುವಾರ ಬೆಳಿಗ್ಗೆ ಸ್ಕೂಟರ್ ಮತ್ತು ನಗರ ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದು ದುರಂತವೇ ಸರಿ.
ಕುವೆಂಪುನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್‌ನ ಮುಖ್ಯ ರಸ್ತೆಯಿಂದ ಶ್ರೀರಾಂಪುರದ ಬೆಮೆಲ್ ನಗರದವರೆಗೂ ರಸ್ತೆ ಬದಿಯಲ್ಲಿ ವ್ಯಾಪಾರಿಗಳು, ಬೇಕರಿ, ಹೋಟೆಲ್‌ಗಳು ಹಾಗೂ ಇನ್ನಿತರೆ ಅಂಗಡಿಗಳವರು ಫುಟ್‌ಪಾತ್ ಆಕ್ರಮಿಸಿಕೊಂಡಿದ್ದಾರೆ.
ತರಕಾರಿ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಈಗಲಾದರೂ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ರಸ್ತೆ ಹಾಗೂ -ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





