ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ತನ್ನ ಪಾದರಕ್ಷೆ ಎಸೆದಿರುವುದು ಅತ್ಯಂತ ಖಂಡನೀಯ. ಇಂತಹ ಅಪಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ. ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ವಕೀಲ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಇಂತಹ ಅಪಕೃತ್ಯ ಎಸಗಲು ಮುಂದಾಗಿದ್ದ ಘಟನೆ ಇಡೀ ನ್ಯಾಯಾಂಗ ವ್ಯವಸ್ಥೆಗೆ ಅಗೌರವ ತಂದಿದೆ.
ಸಾಮಾನ್ಯ ವ್ಯಕ್ತಿ ಇಂತಹ ಅಪಕೃತ್ಯ ಎಸಗಿದ್ದರೆ ಯಾರದೋ ಪ್ರಭಾವ ಇದರ ಹಿಂದೆ ಕೆಲಸ ಮಾಡಿದೆ ಎಂದು ಹೇಳಬಹುದಿತ್ತು, ಆದರೆ ಕಾನೂನು ತಿಳಿದಿರುವ ವಕೀಲರೇ ಇಂತಹ ಕೃತ್ಯ ಎಸಗಿರುವುದು ನ್ಯಾಯಾಂಗ ನಿಂದನೆಯಾಗಿದೆ. ಆದ್ದರಿಂದ ಸಾಂವಿಧಾನಿಕ ಪೀಠಕ್ಕೆ ಅಗೌರವ ತೋರಿದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
– ಎಂ.ಪಿ.ದರ್ಶನ್ ಚಂದ್ರ, ಮುಕ್ಕಡಹಳ್ಳಿ, ಚಾಮರಾಜನಗರ ತಾ.





