ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ ರಥೋತ್ಸವ ಸ್ಥಗಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಥೋತ್ಸವಕ್ಕೂ ಮುನ್ನ ಸಂಬಂಧಪಟ್ಟವರು ರಥವನ್ನು ಪರಿಶೀಲಿಸದೇ ಇರುವುದೇ ಈ ಘಟನೆಗೆ ಕಾರಣವಾಗಿದೆ. ರಥೋತ್ಸವದ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸದೇ ಇರುವುದರಿಂದ ಪ್ರಾಣ ಹಾನಿಯಾದ ಘಟನೆಗಳೂ ನಡೆದಿವೆ.
ವರ್ಷಕ್ಕೊಮ್ಮೆ ರಥೋತ್ಸವಗಳು ನಡೆಯುವುದರಿಂದ ಸಂಬಂಧಪಟ್ಟವರು ಮುಂಚಿತವಾಗಿ ರಥದ ಚಕ್ರವನ್ನು ಪರಿಶೀಲಿಸಿ ನ್ಯೂನತೆಗಳಿದ್ದರೆ ದುರಸ್ತಿ ಮಾಡುವ ಮೂಲಕ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
– ಎಂ.ಪಿ.ದರ್ಶನ್ ಚಂದ್ರ, ಮುಕ್ಕಡಹಳ್ಳಿ, ಚಾ.ನಗರ




