ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ
ಈ ಅಮಾನವೀಯ ಕ್ರೂರ ಕೃತ್ಯಕ್ಕೆ
ಇಡೀ ನಾಗರಿಕ ಸಮಾಜವೇ
ತಲೆ ತಗ್ಗಿಸುತ್ತಿದೆ
ತಾ ಹೆತ್ಹೊತ್ತು ತುತ್ತಿಟ್ಟ
ಕುಡಿಯ ಕಂಡು ಕರುಣೆಬಾರದಾಯಿತೆ!
‘ಮಾನ’ದೊಡ್ಡದಾಗಿ ಕೊಡಲಿ ಹಿಡಿದು,
ಹೆತ್ತಮಗಳ ಬದುಕಿಗೆ
ಕೊಳ್ಳಿಯಾಯಿತೆ
ಹೆತ್ತಕರುಳೆ ಕುಡಿಯ ಕೊಂದರೆ
ಮತ್ಯಾರನ್ನು ಕಾವಯೆಂದು ಕೂಗಲಿ
ಜಾತಿ, ಧರ್ಮ, ವಿಷದ ನಶೆಗೆ
ಮರ್ಯಾದೆಗೇಡು ಹತ್ಯೆಗಳು ನಿಲ್ಲಲಿ
ಜಾತಿಯೇ ತೊಲಗು
ಈ ಇಳೆಯಿಂದಾಚೆಗೆ…
ಜಾತಿ ಅಳಿಯಲಿ
ಜೀವ ಉಳಿಯಲಿ
(ಹುಬ್ಬಳ್ಳಿಯಲ್ಲಿ ಅನ್ಯ ಜಾತಿ ಯುವಕನ ಮದುವೆಯಾದ ಮಗಳನ್ನು , ತಂದೆಯೇ ಕೊಂದಿರುವ ಘಟನೆ ಹಿನ್ನೆಲೆಯಲ್ಲಿ ಬರೆದ ಕವನ)
-ಶಿವಣ್ಣ ಕಣೇನೂರು, ನಂಜನಗೂಡು ತಾಲ್ಲೂಕು





