ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಮಾತನ್ನು ನಾನು ಒಪ್ಪುತ್ತೇನೆ. ನಾನು ಕರ್ನಾಟಕ ವಿಧಾನಪರಿಷತ್ ಸದಸ್ಯನಾಗಿದ್ದಾಗ ಬಿಜೆಪಿ ಸರ್ಕಾರಕ್ಕೆ ಒಂದು ಸ್ಪಷ್ಟನೆ ನೀಡಿದ್ದೆ. ಆ ಸಂದರ್ಭದಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿಯವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ಕಾಂತರಾಜು ಅಥವಾ ಸದಾಸಿದ ಕಮಿಟಿ ವರದಿ’ ಎಂಬ ಯಾವುದೇ ದಾಖಲೆಗಳು ಸರ್ಕಾರದಲ್ಲಿ ಇಲ್ಲ ಎಂದು ಹೇಳಿದ್ದರು. ಈ ಮಾತನ್ನು ಕೇಳಿದ ನನಗೆ ಸರ್ಕಾರಗಳು ಯಾವ ರೀತಿಯಾಗಿ ಆಡಳಿತ ನಡೆಸುತ್ತಿವೆ ಎಂಬ ಬಗ್ಗೆ ತಿಳಿದು ಆಘಾತವಾಯಿತು.
1931ರಲ್ಲಿ ಭಾರತದ ಜಾತಿಗಣತಿಯನ್ನು ಬ್ರಿಟಿಷ್ ಸರ್ಕಾರ ಮಾಡಿತ್ತು, ನಂತರ ಯಾವುದೇ ಸರ್ಕಾರಗಳು ಅದನ್ನು ಮಾಡಲಿಲ್ಲ. ಸಮಾಜವಾದಿ ಧುರೀಣ ದಿವಂಗತ ರಾಮ ಮನೋಹರ ಲೋಹಿಯಾ ಈ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಅವರ ಒತ್ತಾಯಕ್ಕೆ ಯಾರೂ ಓಗೊಡಲಿಲ್ಲ.
ಇದೀಗ ರಾಹುಲ್ ಗಾಂಧಿ ಮತ್ತು ಆರ್.ಎಸ್.ಎಸ್‌ನವರು ಕೂಡ ಜಾತಿಗಣತಿ ಆಗಬೇಕೆಂದು ಹೇಳಿದ್ದಾರೆ. ಕಾಂತರಾಜು ವರದಿ ಎಂದು ಬಿಂಬಿಸುತ್ತಿರುವ ಮತ್ತು 180 ಕೋಟಿ ರೂ. ವ್ಯಯ ಮಾಡಿ ಮಾಡಿರುವ ವರದಿಯನ್ನು ಬಿಡುಗಡೆ ಮಾಡಬೇಕಿದೆ. ಸರ್ಕಾರ ಮತ್ತು ಪ್ರತಿ ಪಕ್ಷಗಳು ವರದಿ ಬಿಡುಗಡೆಯಾದ ನಂತರ ಚರ್ಚೆಯಲ್ಲಿ ತೊಡಗಲಿ, ಬೇಕಿದ್ದರೆ ಆ ನಂತರ ಅದನ್ನು ತಿರಸ್ಕರಿಸಲಿ, ಇದಾಗದಿದ್ದಲ್ಲಿ ಎಲ್ಲ ವರದಿಗಳಿಗೆ ಅಂದರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸರ್ವೆಯ ವರದಿಗಳನ್ನು ಅಪಾರ್ಥ ಮಾಡಿದಂತಾಗುತ್ತದೆ. ಆ ವರದಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಜಾತಿ ಗಣತಿಯ ವರದಿ ಬಿಡುಗಡೆಯಾದರೆ ರವಿವರ್ಮ ಕುಮಾರ್, ದ್ವಾರಕನಾಥ್, ಜಯಪ್ರಕಾಶ್ ಇತರರ ಕಾಳಜಿಯಂತ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಅನುಕೂಲವಾಗುತ್ತದೆ.
-ಮೋಹನ್ ಕುಮಾರ್ ಕೊಂಡಜ್ಜಿ, ವಿಧಾನ ಪರಿಷತ್ ಮಾಜಿ ಸದಸ್ಯ.