ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿಯಲ್ಲಿ ಬಸ್ ತಂಗುದಾಣವಿಲ್ಲದ ಜನರು ರಸ್ತೆ ಬದಿಯಲ್ಲಿಯೇ ನಿಂತು ಬಸ್‌ಗಳಿಗಾಗಿ ಕಾಯಬೇಕಾಗಿದೆ.
ಸಂತೇಮರಹಳ್ಳಿಯಿಂದ ಕೊಳ್ಳೇಗಾಲ, ತಿ.ನರಸೀಪುರ ಹಾಗೂ ಮೈಸೂರಿಗೆ ಪ್ರತಿನಿತ್ಯ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಸಂಚರಿಸುತ್ತಾರೆ. ಅದರೆ ಇಲ್ಲಿ ಬಸ್ ತಂಗುದಾಣವಿಲ್ಲದೇ ಪ್ರಯಾಣಿಕರು ರಸ್ತೆ ಬದಿಯ ವಿವಿಧ ಕಚೇರಿ, ಅಂಗಡಿ ಮುಂಗಟ್ಟುಗಳ ಮುಂದೆಯೇ ನಿಂತು ಬಸ್‌ಗಾಗಿ ಕಾಯಬೇಕಿದೆ.
ಹೀಗೆ ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೆ ಬಸ್‌ಗಾಗಿ ಕಾಯುತ್ತಿದ್ದರೂ ಕೆಲ ಬಾರಿ ಬಸ್‌ಗಳು ಇಲ್ಲಿ ನಿಲುಗಡೆಯನ್ನೇ ನೀಡುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ಭಾಗದಲ್ಲಿ ಒಂದು ಬಸ್ ಕಂಗುದಾಣ ನಿರ್ಮಿಸಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.





