ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರು ಮತ್ತು ಮಲ್ಲಮ್ಮನ ಹುಂಡಿ ಗ್ರಾಮಗಳ ನಡುವೆ ನೀರಹಳ್ಳಕ್ಕೆ ಸೇತುವೆ ನಿರ್ಮಿಸಿದ್ದು, ನಿರ್ಮಾಣವಾದ ಕೆಲ ದಿನಗಳಲ್ಲೇ ಬಿರುಕು ಬಿಟ್ಟಿದೆ. ಸೇತುವೆಯ ಬದಿಯಲ್ಲಿ ಕಲ್ಲಿನ ತಡೆ ಗೋಡೆಗಳನ್ನು ನಿರ್ಮಿಸದೇ ಇರುವುದರಿಂದ ಮಳೆ ಹೆಚ್ಚಾದಾಗ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಉಂಟಾಗುತ್ತಿದೆ. ಗುತ್ತಿಗೆದಾರರು ಸೇತುವೆ ಕಾಮಗಾರಿಗೆ ಸಂಬಂಧಪಟ್ಟ ಮಾಹಿತಿ ಫಲಕವನ್ನೂ ಹಾಕಿರುವುದಿಲ್ಲ. ನಿಯಮಾನುಸಾರ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸಂಬಂಧಪಟ್ಟವರು ಸೂಚನೆ ನೀಡಬೇಕು.
-ಬಸವ ನಾಯಕ, ಮಲ್ಲಮ್ಮನಹುಂಡಿ , ಗುಂಡ್ಲುಪೇಟೆ ತಾ.





