ದೇಶದ ಲೋಕಸಭಾ ಚುನಾವಣೆಯ ಒಟ್ಟು ಏಳು ಹಂತಗಳ ಮತದಾನದ ಪೈಕಿ ಐದು ಹಂತಗಳು ಮುಗಿದಿವೆ. ಅದರಲ್ಲಿ ಕರ್ನಾಟಕವೂ ಒಂದು. ಆದರೆ, ಚುನಾವಣಾ ಮಾದರಿ ನೀತಿ ಸಂಹಿತೆ ಮುಂದುವರಿದಿದೆ. ಇದು ರಾಜ್ಯ ಸರ್ಕಾರ ಕೈಗೊಳ್ಳಬಹುದಾದ ಜನೋಪಯೋಗಿ ಯೋಜನೆಗಳಿಗೆ ಅಡ್ಡಿಯಾಗಿದೆ. ಇದರಿಂದ ಹಲವು ಜನಪ್ರತಿನಿಧಿಗಳು ನೀತಿ ಸಂಹಿತೆಯ ಪ್ರಸ್ತಾಪ ಮಾಡಿ, ಕರ್ತವ್ಯದಿಂದ ನುಣುಚಿಕೊಳ್ಳುವುದಕ್ಕೆ ಅನುಕೂಲವಾಗಿದೆ. ಹಾಗಾಗಿ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ಈಗಾಗಲೇ ಮತದಾನ ಮುಗಿದಿರುವ ಎಲ್ಲ ರಾಜ್ಯಗಳಲ್ಲೂ ನೀತಿ ಸಂಹಿತೆಯನ್ನು ಸಡಿಲಿಸಬೇಕು. -ಎಂ.ಆರ್.ರಾಜವರ್ಧನ್, ಕುವೆಂಪುನಗರ, ಮೈಸೂರು.