ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳು, ನ್ಯಾಯಾಲಯ ಮೊದಲಾದ ಕಡೆ ಬಾಂಬ್ ಇಡಲಾಗಿದೆ ಎಂದು ದುಷ್ಕರ್ಮಿಗಳು ಫೋನ್, ಇ-ಮೇಲ್ ಮೂಲಕ ಬೆದರಿಕೆ ಹಾಕುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಬೆದರಿಕೆ ಕರೆ ಬಂದಕೂಡಲೇ ಬಾಂಬ್ ನಿಷ್ಕ್ರಿಯಮ ದಳದವಳು ಶ್ವಾನದಳದೊಂದಿಗೆ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದರೆ ಯಾವುದೇ ಬಾಂಬ್ ಪತ್ತೆಯಾಗುವುದಿಲ್ಲ. ಬಾಂಬ್ ಬೆದರಿಕೆ ಕರೆಯಿಂದಾಗಿ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ. ಶಾಲಾ ಕಾಲೇಜು, ನ್ಯಾಯಾಲಯ ಮೊದಲಾದ ಸ್ಥಳಗಳಲ್ಲಿ ನಡೆಯುವ ಕೆಲಸ ಕಾರ್ಯಗಳು ಸ್ಥಗಿತಗೊಂಡು ಸಮಯ ವ್ಯರ್ಥವಾಗುತ್ತದೆ.
ಸರ್ಕಾರ ಬಾಂಬ್ ಬೆದರಿಕೆ ಹಾಕುವವರಿಗೆ ಕಠಿಣ ಶಿಕ್ಷೆ ನೀಡುವುದರೊಂದಿಗೆ ಬೇರೆ ಯಾರೂ ಇನ್ನು ಮುಂದೆ ಇಂತಹ ದುಷ್ಕೃತ್ಯಗಳನ್ನು ನಡೆಸದಂತೆ ಕಠಿಣ ಕಾನೂನು ಜಾರಿಗೆ ತರುವುದು ಅಗತ್ಯ.
-ಎಂ.ಎಸ್. ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು



