ಮೈಸೂರಿನಲ್ಲಿ ಬಸ್ ನಿಲ್ದಾಣ, ರೈಲು ನಿಲ್ದಾಣ ಮೊದಲಾದ ಕಡೆಗೆ ತೆರಳುವವರು, ಅದರಲ್ಲೂ ಮುಖ್ಯವಾಗಿ ಒಬ್ಬರೇ ಪ್ರಯಾಣಿಸುವವರು ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ಬೈಕ್ ಟ್ಯಾಕ್ಸಿಯನ್ನೇ ಅವಲಂಬಿಸಿದ್ದಾರೆ. ಕೆಲವೊಮ್ಮೆ ಬೈಕ್ ಟ್ಯಾಕ್ಸಿಯವರು ಬುಕ್ಕಿಂಗ್ ಆದ ೨೦ ನಿಮಿಷಗಳ ನಂತರ ಬುಕ್ಕಿಂಗ್ ಅನ್ನು ರದ್ದು ಮಾಡುವುದರಿಂದ ರೈಲು ಹಾಗೂ ಬಸ್ಸಿನ ಮೂಲಕ ಊರುಗಳಿಗೆ ತೆರಳುವವರಿಗೆ ಸಕಾಲಕ್ಕೆ ತಲುಪಲು ತೊಂದರೆಯಾಗುತ್ತಿದೆ.
ಒಬ್ಬರು ಪ್ರಯಾಣಿಕನನ್ನು ಕರೆದುಕೊಂಡು ಹೋಗುವಾಗಲೇ ಮತ್ತೊಂದು ಬುಕ್ಕಿಂಗ್ ಮಾಡಿಕೊಂಡು ನಿಗದಿತ ಸಮಯಕ್ಕೆ ತಲುಪುವ ಧಾವಂತದಲ್ಲಿ ಮಿತಿ ಮೀರಿದ ವೇಗದಲ್ಲಿ ಹೋಗುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ. ಸಂಬಂಧಪಟ್ಟವರು ಕೂಡಲೇ ನಿಯಮವನ್ನು ಪಾಲಿಸಲು ಬೈಕ್ ಟ್ಯಾಕ್ಸಿ ಚಾಲಕರಿಗೆ ಸೂಚಿಸುವುದರ ಮೂಲಕ ಪ್ರಯಾಣಿಕರ ಹಿತ ಕಾಪಾಡಬೇಕಾಗಿದೆ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು



