ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ‘ಮಾನವಿಕ ವಿಭಾಗ’ ಕಟ್ಟಡದ ಎದುರಿನಲ್ಲಿರುವ ಬೋರ್ವೆಲ್‌ನ ಎಲೆಕ್ಟ್ರಿಕ್ ವೈರ್ ತೀರ ಕೆಳಗೆ ಮತ್ತು ಕೈಗೆ ಎಟುಕುವ ಹಾಗೆ ಇದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಾರೆ.
ಪ್ರತಿನಿತ್ಯ ಮುಂಜಾನೆ ಹಿರಿಯರು ಮತ್ತು ಅಧಿಕಾರಿಗಳು, ಮಹಿಳೆಯರು ವಾಕಿಂಗ್‌ಗೆ ಬರುತ್ತಾರೆ. ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸ್ವಚ್ಛತಾ ಸಿಬ್ಬಂದಿ ಸ್ವಚ್ಛತೆ ಮಾಡುವಾಗ ಹಾಗೂ ತೋಟಗಾರಿಕೆ ಸಿಬ್ಬಂದಿ ಗಿಡಗಳಿಗೆ ನೀರು ಹಾಕಲು ಬರುತ್ತಾರೆ ಇಂತಹ ಸಮಯದಲ್ಲಿ ಆಕಸ್ಮಿಕವಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇರುವುದರಿಂದ ವಿಶ್ವವಿದ್ಯಾನಿಲಯದ ಆಡಳಿತಾಧಿಕಾರಿಗಳು ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





