Mysore
32
scattered clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಓದುಗರ ಪತ್ರ: ರೈಲು ಟಿಕೆಟ್ ರದ್ದತಿ ಹೊಸ ನಿಯಮದ ಬಗ್ಗೆ ಅರಿವಿರಲಿ

ಭಾರತೀಯ ರೈಲ್ವೆ ಇಲಾಖೆಯು ಕಾಯ್ದಿರಿಸುವ ಮುಂಗಡ ಟಿಕೆಟ್ ರದ್ದತಿಯ ಬಗ್ಗೆ ಹೊಸ ನಿಯಮವನ್ನು ಏಪ್ರಿಲ್ ೧ರಿಂದ ಜಾರಿಗೆ ತಂದಿದೆ. ಪ್ರಯಾಣಿಸುವ ಮುನ್ನ ೮ ಗಂಟೆಗಳ ಒಳಗಾಗಿ ಟಿಕೆಟ್ ರದ್ದುಮಾಡಿದ್ದಲ್ಲಿ ಯಾವುದೇ ಮರುಪಾವತಿ ಇರುವುದಿಲ್ಲ. ೮ ರಿಂದ ೨೪ ಗಂಟೆಗಳ ಒಳಗೆ ಟಿಕೆಟ್ ರದ್ದು ಮಾಡಿದಲ್ಲಿ ಟಿಕೆಟ್‌ಗೆ ಪಾವತಿಸಿರುವ ಮೊತ್ತಕ್ಕೆ ಅನುಗುಣವಾಗಿ ಶೇ.೫೦ರಷ್ಟು ಮರುಪಾವತಿ ಮಾಡಲಾಗುತ್ತದೆ. ೨೪ ರಿಂದ ೭೨ ಗಂಟೆಗಳ ಒಳಗೆ ಟಿಕೆಟ್ ರದ್ದಾದರೆ ಪಾವತಿಸಿದ ಮೊತ್ತಕ್ಕೆ ಶೇ. ೨೫ರಷ್ಟು ಕಡಿತಗೊಳಿಸಿ, ಶೇ.೭೫ರಷ್ಟು  ಮರುಪಾವತಿಸಲಾಗುತ್ತದೆ.

೭೨ ಗಂಟೆಗಳಿಗಿಂತ ಮೊದಲು ಟಿಕೆಟ್ ರದ್ದಾದರೆ ಟಿಕೆಟ್‌ಗೆ ಪಾವತಿಸಿದ ಮೊತ್ತವನ್ನು ಸಂಪೂರ್ಣವಾಗಿ ವಾಪಸ್ ಪಡೆಯಬಹುದಾಗಿದೆ. ಇದರ ಜೊತೆಗೆ ರೈಲು ನಿರ್ಗಮನಕ್ಕೆ ೩೦ ನಿಮಿಷಗಳವರೆಗೆ ಬೋರ್ಡಿಂಗ್ ಸ್ಟೇಷನ್ ಬದಲಾಯಿಸಲು ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿದೆ.

 -ನಾಗೇಶ್ ಮಾನಸಗಂಗೋತ್ರಿ, ಮೈಸೂರು

 

Tags:
error: Content is protected !!