Mysore
18
few clouds

Social Media

ಸೋಮವಾರ, 05 ಜನವರಿ 2026
Light
Dark

ಓದುಗರ ಪತ್ರ: ರಸ್ತೆಗಳಲ್ಲಿ ಒಕ್ಕಣೆ ನಿಷೇಧಿಸಿ

ರಾಜ್ಯದ ವಿವಿಧ ಭಾಗಗಳಲ್ಲಿ ರಾಗಿ, ಭತ್ತ, ಜೋಳ ಮೊದಲಾದ ಫಸಲನ್ನು ಒಕ್ಕಣೆ ಮಾಡಲು ರಸ್ತೆಯನ್ನೇ ಬಳಸುತ್ತಿದ್ದು, ಇದರಿಂದ ಅಪಘಾತಗಳು ಸಂಭವಿಸಿ ವಾಹನ ಚಾಲಕರು ಮೃತಪಟ್ಟರೂ ಇನ್ನೂ ರಸ್ತೆಯ ಮೇಲೆ ಒಕ್ಕಣೆ ನಿಷೇಧಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ದಶಕಗಳ ಹಿಂದೆ ಸುಗ್ಗಿ ಕಾಲದಲ್ಲಿ ಫಸಲು ಒಕ್ಕಣೆ ಮಾಡಲು ಕಣಗಳನ್ನು ನಿರ್ಮಿಸಿ ರೋಣಗಲ್ಲು ಬಳಸಿ ಧಾನ್ಯಗಳನ್ನು ಬೇರ್ಪಡಿಸುತ್ತಿದ್ದರು. ಈಗ ಧಾನ್ಯ ಒಕ್ಕಣೆಗೆ ಯಂತ್ರಗಳು ಬಂದಿರುವುದರಿಂದ ರೈತರು ಕಣ ಸಂಸ್ಕೃತಿಯನ್ನೇ ಮರೆತಿದ್ದಾರೆ. ಹೆಚ್ಚು ಭೂಮಿ ಇರುವ ರೈತರು ಧಾನ್ಯ ಒಕ್ಕಣೆ ಯಂತ್ರಗಳನ್ನು ಬಾಡಿಗೆ ಪಡೆದು -ಸಲು ಕಟಾವಿನ ಜೊತೆಗೆ ಧಾನ್ಯವನ್ನೂ ಒಕ್ಕಣೆ ಮಾಡಿಸುತ್ತಾರೆ. ಸಣ್ಣ ರೈತರು ಒಕ್ಕಣೆ ಮಾಡಲು ಕಣವಿಲ್ಲದೆ ರಸ್ತೆಯ ಮೇಲೆ ಫಸಲನ್ನು ಹರಡುತ್ತಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಸರ್ಕಾರ ರೈತರಿಗೆ ಸಾಮೂಹಿಕವಾಗಿ ಧಾನ್ಯ ಒಕ್ಕಣೆಗೆ ಕಣ ನಿರ್ಮಿಸಬೇಕು. ರಸ್ತೆಯ ಮೇಲೆ ಧಾನ್ಯ ಒಕ್ಕಣೆ ನಿಷೇಧಿಸುವ ಮೂಲಕ ಜೀವ ಹಾನಿಯನ್ನು ತಡೆಗಟ್ಟಬೇಕು.

-ಎ.ಎಸ್. ಗೋವಿಂದೇಗೌಡ, ಅರೇನಹಳ್ಳಿ, ಪಿರಿಯಾಪಟ್ಟಣ ತಾ.

Tags:
error: Content is protected !!