ದೆಹಲಿಯಲ್ಲಿ ಮಾತ್ರ ಪಟಾಕಿ ನಿಷೇಧಿಸದೆ ದೇಶದಾದ್ಯಂತ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿರುವುದು ಅತ್ಯಂತ ಸಮಂಜಸವಾಗಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಎಲ್ಲೆ ಮೀರಿ ಪಟಾಕಿ ಸುಡುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟಾಗಿ ಇಡೀ ಪರಿಸರವೇ ಮಲಿನಗೊಳ್ಳುತ್ತದೆ. ಮಕ್ಕಳು ಮತ್ತು ವೃದ್ಧರ ಸ್ಥಿತಿ ಹದಗೆಡುತ್ತದೆ.
ಶ್ವಾಸಕೋಶ ಸಂಬಂಧಿತ ರೋಗಗಳ ಹುಟ್ಟಿಗೆ ಕಾರಣ ವಾಗುತ್ತದೆ. ಭಾರಿ ಶಬ್ದದ ಪಟಾಕಿಗಳಿಂದ ಹೃದಯ ಕಾಯಿಲೆ ಇರುವವರು ಮರಣ ಹೊಂದಿರುವುದೂ ಉಂಟು. ಇನ್ನು ನಾಯಿ ಮುಂತಾದ ಮೂಕಪ್ರಾಣಿ-ಪಕ್ಷಿಗಳ ವೇದನೆ ಹೇಳತೀರದು.ಇಷ್ಟೆಲ್ಲ ಅವಘಡಕ್ಕೆ ಕಾರಣವಾಗಿರುವ ಪಟಾಕಿಯನ್ನು ದೇಶದ ಎಲ್ಲ ರಾಜ್ಯಗಳೂ ನಿಷೇಧಿಸುವುದು ಅಗತ್ಯವಾಗಿದೆ.
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು





