Mysore
20
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಡೇಟಿಂಗ್ ಆಪ್‌ಗಳನ್ನು ನಿಷೇಧಿಸಿ

ಓದುಗರ ಪತ್ರ

ಇತ್ತೀಚೆಗೆ ಡೇಟಿಂಗ್ ಆಪ್‌ಗಳ ಹಾವಳಿ ಹೆಚ್ಚಾಗಿದೆ. ಮೊಬೈಲ್‌ಗಳಲ್ಲಿ ಒಂದೇ ಕ್ಲಿಕ್‌ನಿಂದ ಅನ್ಯರೊಂದಿಗೆ ಪರಿಚಯ, ಸಂಭಾಷಣೆ ಹಾಗೂ ಸಂಬಂಧ ಬೆಳೆಸುವ ಅವಕಾಶ ಸಿಗುತ್ತಿದೆ. ಆದರೆ ಇದರ ಪರಿಣಾಮಗಳು ಬಹಳ ಗಂಭೀರವಾಗಿವೆ.

ಬಹುತೇಕ ಯುವಕರು ಈ ಆಪ್‌ಗಳಲ್ಲಿ ಅತಿಯಾಗಿ ತೊಡಗಿಸಿಕೊಂಡುನೈಜ ಜೀವನದಿಂದ ದೂರವಾಗುತ್ತಿದ್ದಾರೆ. ಸುಳ್ಳು ಪ್ರೊಫೈಲ್‌ಗಳು, ಮೋಸಗಳು, ಬ್ಲಾಕ್‌ಮೇಲ್‌ಗಳು ಹಾಗೂ ಆನ್‌ಲೈನ್ ಅಪರಾಧಗಳ ಪ್ರಮಾಣವೂ ಏರಿಕೆಯಾಗುತ್ತಿದೆ. ಡೇಟಿಂಗ್ ಆಪ್‌ಗಳ ಮೂಲಕ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವ ಯುವಕರು- ಯುವತಿಯರು ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಹಲವಾರು ಯುವತಿ ಯರ ಶೋಷಣೆ ನಡೆಯುತ್ತಿದೆ.

ಈ ಆಪ್‌ಗಳು ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿವೆ. ಜೊತೆಗೆ ಏಕಾಂತ, ಆತಂಕ ಮತ್ತು ಮಾನಸಿಕ ಕ್ಷೋಭೆಯನ್ನು ಉಂಟು ಮಾಡಿ,ಯುವ ಸಮುದಾಯದಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಾಗುತ್ತಿದೆ. ಸಮಾಜದಲ್ಲಿ ನಂಬಿಕೆ ಮತ್ತು ಗೌರವದ ಬಾಂಧವ್ಯ ಹದಗೆಡುತ್ತಿದೆ. ಆದ್ದರಿಂದ ಸರ್ಕಾರವು ಡೇಟಿಂಗ್ ಆಪ್‌ಗಳನ್ನು (ಟೆಂಡರ್, ಬ್ಲೂಕಾಟ್ ಇತ್ಯಾದಿ) ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು, ಸಾಧ್ಯವಾದರೆ ಸಂಪೂರ್ಣ ನಿಷೇಧಿಸಬೇಕು. ಯುವ ಪೀಳಿಗೆಗೆ ಸುರಕ್ಷಿತ ಮತ್ತು ಸನ್ಮಾರ್ಗದ ದಾರಿ ತೋರುವುದು ಸರ್ಕಾರದ ಜವಾಬ್ದಾರಿ.

-ಡಾ. ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!