ಸಮತೋಲನದ ಬಜೆಟ್!…
ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ
ಕರ್ನಾಟಕದ ಮಾದರಿ ಜನಪರ ಬಜೆಟ್!
ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ
ಸುಸ್ಥಿರ ಆರ್ಥಿಕಾಭಿವೃದ್ಧಿಯ ಆಶಯದಲಿ!
ಪಂಚ ಗ್ಯಾರಂಟಿಗಳೊಂದಿಗೆ ಅಭಿವೃದ್ಧಿ ಶಕೆಗೆ
ನಾಂದಿ ಹಾಡುವ, ಕೃಷಿ, ಗ್ರಾಮೀಣಾಭಿವೃದ್ಧಿ,
ನಗರಾಭಿವೃದ್ಧಿ, ಮೂಲಸೌಕರ್ಯಾಭಿವೃದ್ಧಿಗಳಿಗೆ
ಆದ್ಯತೆ ನೀಡುವ
ಶಿಕ್ಷಣ, ಆಡಳಿತ ಸುಧಾರಣೆ, ಮಹಿಳಾ ಸಬಲೀಕರಣ,
ಉದ್ಯೋಗ ಸೃಷ್ಟಿಗೆ ಒತ್ತು ನೀಡುವ
ಸಮತೋಲನದ ಜನಸ್ನೇಹಿ ಬಜೆಟ್
ಆಡಳಿತ ಸುಧಾರಣೆ ಆರ್ಥಿಕ ದೃಢತೆ
ಸಾಧಿತವಾಗಬೇಕಾದರೆ ಬೀಳಬೇಕು
ಭ್ರಷ್ಟಾಚಾರಕೆ ದೊಡ್ಡ ಬ್ರೇಕ್!
-ಪ್ರೊ.ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು.





