ಮೈಸೂರಿನ ರಂಗಾಯಣದಲ್ಲಿ ಜ.೧೧ರಿಂದ ಆರಂಭವಾಗಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಧ್ಯೇಯವಾಕ್ಯ ಅತ್ಯಂತ ಸಮಂಜಸವಾಗಿದೆ. ‘ಬಾಬಾಸಾಹೇಬ್ -ಸಮತೆಯೆಡೆಗೆ ನಡಿಗೆ’ ಎಂಬ ಆಶಯದ ನುಡಿ ಅತ್ಯಂತ ಪ್ರಸ್ತುತವಾಗಿದೆ.
ಜಾತೀಯತೆಯ ಅಟ್ಟಹಾಸವು ಆಧುನಿಕ ಕಾಲಘಟ್ಟದಲ್ಲಿ ಮೀಸಲಾತಿಯ ಕಲಸುಮೇಲೋಗರ, ಬಾಡಿಗೆ ಮನೆ ಕೊಡದಿರುವುದು… ಹೀಗೆ ಹೊಸ ಬಗೆಯ ಪೋಷಾಕಿನಲ್ಲಿ ದಲಿತರು, ಅಸ್ಪ ಶ್ಯರ ಕತ್ತು ಹಿಸುಕುತ್ತಿದೆ. ಸಂವಿಧಾನ ಮತ್ತು ಅದರಿಂದ ನಿರ್ದೇಶಿತವಾದ ಹಕ್ಕುಗಳಿಗೆ ವ್ಯತಿರಿಕ್ತ ಅರ್ಥಗಳನ್ನು ಕೊಡುವ ಯತ್ನವನ್ನು ಕೆಲ ಜಾತಿವಾದಿ ಮನಸ್ಸಗಳು ನಿರಂತವಾಗಿ ಮಾಡುತ್ತಿವೆ. ಅದಕ್ಕೆ ಅಸ್ಪೃಶ್ಯರನ್ನೇ ಬಳಸಿ ಕೊಳ್ಳುವ ಹುನ್ನಾರ ಕೂಡ ನಡೆಯುತ್ತಿದೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ನೈಜತೆಯನ್ನು ಪ್ರದರ್ಶಿಸುವ ನೆಪದಲ್ಲಿ ಜಾತಿವಾದವನ್ನು ಸಮರ್ಥಿಸಿಕೊಳ್ಳುವಂತಹ ಹುನ್ನಾರಗಳು ನಡೆಯುತ್ತಿವೆ. ಅಂಬೇಡ್ಕರ್ ಜಾತಿವಾದ, ಎಲ್ಲ ಧರ್ಮಗಳ ಮೌಢ್ಯವನ್ನು ವಿರೋಧಿಸಿದವರು, ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದವರು. ಅದನ್ನು ಯಥಾವತ್ತಾಗಿ ಜನರಿಗೆ ಮುಟ್ಟಿಸುವಂತಹ ನಿಟ್ಟಿನಲ್ಲಿ ಬಹುರೂಪಿ ದಿಟ್ಟ ಹೆಜ್ಜೆ ಇಟ್ಟಿದೆ ಅನಿಸುತ್ತಿದೆ. ಅಂಬೇಡ್ಕರ್ ಅವರು ಕಂಡ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕನಸನ್ನು ಈಡೇರಿಸುವುದರ ಭಾಗವಾಗಿ ಬಹುರೂಪಿ ನಾಟಕೋತ್ಸವ ರೂಪಿತವಾಗಿದ್ದರೆ, ಅದು ಹೆಚ್ಚು ಅರ್ಥಪೂರ್ಣ.
-ಎಸ್.ದೀಕ್ಷನ್, ನಂಜನಗೂಡು





