ಹಿರಿಯ ನಟಿ ಬಿ.ಸರೋಜಾದೇವಿಯವರು ತಮ್ಮ ೧೭ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ೧೭ನೇ ವಯಸ್ಸಿನಲ್ಲಿ ಸೂಪರ್ ಸ್ಟಾರ್ ಎಂಬ ಬಿರುದು ಪಡೆದ ಮೊದಲ ನಾಯಕಿ . ೨೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಉದ್ಯೋಗಾವಕಾಶಗಳ ಸೃಷ್ಟಿ ಉತ್ತೇಜಕ ಯೋಜನೆ
ಚಿತ್ರರಂಗದ ಅನೇಕ ದಿಗ್ಗಜರೊಂದಿಗೆ ನಟಿಸಿ ಸಿನಿಮಾಗಳ ಯಶಸ್ವಿಗೆ ಕಾರಣರಾಗಿದ್ದಾರೆ. ಪೌರಾಣಿಕ ಪಾತ್ರಗಳಲ್ಲೂ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಅವರು ವರನಟ ರಾಜಕುಮಾರ್ ಅವರೊಂದಿಗೆ ನಟಿಸಿದ ಬಹುತೇಕ ಎಲ್ಲ ಚಿತ್ರಗಳೂ ಯಶಸ್ವಿಯಾಗಿದ್ದವು. ತಮಿಳು ಚಿತ್ರರಂಗದಲ್ಲಿ ಇವರನ್ನು ‘ಕನ್ನಡದ ಅರಗಿಣಿ’ ಎಂದೇ ಗುರುತಿಸಿರುವುದು, ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಸರೋಜಾದೇವಿ ಅವರು ಮೃದು ಸ್ವಭಾವದ ನಟಿ. ಅವರು ತಮ್ಮ ನಡೆ-ನುಡಿಗಳಿಂದ ಎಲ್ಲರ ಸಿನಿಪ್ರಿಯರ ಮನಸ್ಸು ಗೆದ್ದಿದ್ದರು. ಅವರು ಚಿತ್ರರಂಗದ ಯುವ ಕಲಾವಿದರಿಗೆ ಮಾದರಿಯಾಗಿದ್ದಾರೆ.
–ಎಂ.ಎಸ್.ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಎರಡನೇ ಹಂತ, ಮೈಸೂರು.





