Mysore
14
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಓದುಗರ ಪತ್ರ: ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿ

ಮೈಸೂರು ಮಹಾ ನಗರಪಾಲಿಕೆಯ ಕಚೇರಿ ಸಂಖ್ಯೆ ೧೭ರ ಜನನ-ಮರಣ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಹೋಗುವ ಜನರಿಗೆ ಕುಳಿತುಕೊಳ್ಳಲು ಆಸನಗಳಿಲ್ಲದೆ ಅವರು ಗಂಟೆಗಟ್ಟಲೆ ನಿಂತು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲಿಗೆ ಸಾಮಾನ್ಯವಾಗಿ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಮಹಿಳೆ ಯರು ಆಗಮಿಸು ತ್ತಾರೆ. ಆದರೆ ಇಲ್ಲಿ ಕುಳಿತು ಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದೆ ಇವರೆಲ್ಲರೂ ನಿಂತುಕೊಂಡೇ ಜನನ-ಮರಣ ಪತ್ರಕ್ಕಾಗಿ ಕಾಯಬೇಕಾಗಿದ್ದು, ನಿಂತುಕೊಂಡೇ ಅರ್ಜಿಯನ್ನೂ ಭರ್ತಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಎಲ್ಲದಕ್ಕೂ ನಿರ್ದಿಷ್ಟ ಶುಲ್ಕ ಕಟ್ಟಿಸಿಕೊಳ್ಳುವ ಮಹಾನಗರ ಪಾಲಿಕೆಯವರು ಬರುವ ಸಾರ್ವಜನಿಕರಿಗೆ, ಅದರಲ್ಲಿಯೂ ಹಿರಿಯ ನಾಗರಿಕರಿಗೆ ಸರಿಯಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಲ್ಲವೇ? ಇನ್ನಾದರೂ ಸಂಬಂಧಪಟ್ಟ ಅಽಕಾರಿಗಳು ಈ ಬಗ್ಗೆ ಗಮನ ಹರಿಸಿ ಜನನ-ಮರಣ ಪತ್ರಗಳ ಕಚೇರಿ ಮುಂಭಾಗ ಜನರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕಲ್ಪಿಸಬೇಕಿದೆ.

-ಅಜಯ್ ಶಾಸ್ತ್ರಿ, ಮೈಸೂರು,

Tags:
error: Content is protected !!