Mysore
25
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಓದುಗರ ಪತ್ರ: ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಈ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ತಾಲ್ಲೂಕಿನ ಕೆಲ ಗ್ರಾಮಗಳಿಗೆ ಕಬಿನಿ ನದಿಯಿಂದ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಅನೇಕ ಗ್ರಾಮಗಳನ್ನು ಕಡೆಗಣಿಸಲಾಗಿದೆ.

ಇದರಿಂದಾಗಿ ಈ ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಸದ್ಯ ಕೂಡ್ಲಾಪುರ ಗ್ರಾಮದಲ್ಲಿ ಜನರು ಮಳೆಯ ನೀರನ್ನು ಆಶ್ರಯಿಸಿಕೊಂಡು ಜೀವನ ಸಾಗಿಸುತ್ತಿದ್ದು, ಕುಡಿಯು ವುದಕ್ಕಾಗಲಿ, ವ್ಯವಸಾಯಕ್ಕಾಗಲಿ ಮಳೆಯ ನೀರನ್ನೇ ನಂಬಿಕೊಂಡಿದ್ದಾರೆ. ಬೇಸಿಗೆಯಲ್ಲಿ ಕೆರೆ-ಕಟ್ಟೆಗಳು ಬತ್ತಿ ಹೋದರಂತೂ ಈ ಭಾಗದಲ್ಲಿ ಹನಿ ನೀರಿಗೂ ಹಾಹಾಕಾರ ಶುರುವಾಗುತ್ತದೆ.

ಆಗ ನೀರಿಗಾಗಿ ಜನರು ಅಕ್ಕಪಕ್ಕದ ಗ್ರಾಮಗಳಿಗೆ ಬಿಂದಿಗೆ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಕಬಿನಿ ನದಿಯಿಂದ ಪೈಪ್‌ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕೂಡ್ಲಾಪುರ ಗ್ರಾಮಕ್ಕೆ ಮಾತ್ರ ಇನ್ನೂ ಈ ಭಾಗ್ಯ ಲಭಿಸಿಲ್ಲ. ಈ ಗ್ರಾಮಕ್ಕೆ ನೀರನ್ನು ಪೂರೈಕೆ ಮಾಡಲು ಬೋರ್‌ವೆಲ್‌ಗಳನ್ನು ಕೊರೆದರೂ ನೀರು ಸಿಗುತ್ತಿಲ್ಲ. ಆದ್ದರಿಂದ ಈ ಭಾಗದ ಶಾಸಕರು ಕಬಿನಿ ನದಿಯಿಂದ ಪೈಪ್‌ಲೈನ್ ಅಳವಡಿಸಿ ಕೂಡ್ಲಾಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. -ಕೆ. ಪಿ. ಬಸವಯ್ಯ, ಕೂಡ್ಲಾಪುರ, ನಂಜನಗೂಡು ತಾ.

 

Tags: