ಮೈಸೂರು ಜಿಲ್ಲೆಯ ಪ್ರಸಿದ್ಧ ಯಾತ್ರಾ ಹಾಗೂ ಪ್ರವಾಸ ಸ್ಥಳವಾದ ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ರಾಜ್ಯ ಸಚಿವ ಸಂಪುಟದ ತೀರ್ಮಾನ ಸ್ವಾಗತಾರ್ಹ. ತನ್ಮೂಲಕ ಇಲ್ಲಿಯ ಜನರ ಬಹಳ ವರ್ಷಗಳ ಕನಸು ಈಡೇರಿದಂತಾಗಿದೆ.
ಕಳೆದ ೨ ದಶಕಗಳಿಂದಲೂ ತಲಕಾಡನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೋಷಣೆ ಮಾಡಬೇಕೆಂದು ನಿರಂತರ ಹೋರಾಟ ಮತ್ತು ಪ್ರಯತ್ನಗಳು ನಡೆಯುತ್ತಿದ್ದು ಕಡೆಗೂ ಆ ಹೋರಾಟಗಳು ಫಲ ನೀಡಿವೆ.
-ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು





