Mysore
21
few clouds

Social Media

ಶನಿವಾರ, 31 ಜನವರಿ 2026
Light
Dark

ಓದುಗರ ಪತ್ರ: ಅಂಕೇಗೌಡರಿಗೆ ಸಿಕ್ಕ ಪದ್ಮಶ್ರೀ ಸಾರಸ್ವತ ಲೋಕಕ್ಕೆ ಸಂದ ಗೌರವ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಪುಸ್ತಕ ಪ್ರೇಮಿ ೭೮ ವರ್ಷದ ಅಂಕೇಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಸಂದ ಗೌರವವಾಗಿದೆ. ತಮ್ಮ  ಮನೆಯನ್ನೇ ಗ್ರಂಥಾಲಯವನ್ನಾಗಿ ಮಾಡಿ ಕೊಂಡು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಓದುಗರಿಗೆ ಉಚಿತವಾಗಿ ಪುಸ್ತಕವನ್ನು ಓದಲು ನೀಡುತ್ತಿದ್ದಾರೆ. ಅಲ್ಲಿಯೇ ಓದಿ ಪುಸ್ತಕಗಳನ್ನು ಇಡಬೇಕು, ಅಲ್ಲಿ ಯಾವುದೇ ರೀತಿಯ ರಿಜಿಸ್ಟರ್ ಇರುವುದಿಲ್ಲ. ಪುಸ್ತಕಗಳೆಂದರೆ ಇವರಿಗೆ ಅವರ್ಣನೀಯ ಪ್ರೀತಿ. ತಮಗೆ ಬರುವ ಪಿಂಚಣಿ ಸಂಬಳದಲ್ಲಿ ಬಹು ಪಾಲುಹಣ ವನ್ನು ಪುಸ್ತಕಗಳ ಖರೀದಿಗೆ ಮೀಸಲಿಟ್ಟಿರುತ್ತಾರೆ. ಮತ್ತೊಂದು ವಿಷಯವೆಂದರೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ತಮ್ಮ ಸ್ವಂತ ನಿವೇಶನವನ್ನು ಮಾರಿ ಜ್ಞಾನ ದೇಗುಲವನ್ನು ನಿರ್ಮಿಸಿದ್ದಾರೆ. ಸುಮಾರು ೨೫ ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಇವರಿಗೆ ಪುಸ್ತಕದ ಪ್ರೇಮ ೨೨ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು. ಸುಮಾರು ೫೬ ವರ್ಷಗಳಿಂದ ಸತತವಾಗಿ ಪುಸ್ತಕಗಳನ್ನು ಸಂಗ್ರಹಿಸಿ ಜ್ಞಾನದ ದಾಸೋಹವನ್ನು ಪಸರಿಸುತ್ತಿದ್ದಾರೆ. ಒಂದು ಗ್ರಂಥಾಲಯದಲ್ಲಿ ಮೂರು ನಾಲ್ಕು ಸಾವಿರ ಪುಸ್ತಕಗಳಿದ್ದರೆ ಅದರ ನಿರ್ವಹಣೆಗಾಗಿ ಮೂರು ನಾಲ್ಕು ನೌಕರರು ಇರುತ್ತಾರೆ. ಆದರೆ ಇಲ್ಲಿ ಇವರೊಬ್ಬರೇ ಪುಸ್ತಕ ಮನೆಯನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಈಗಷ್ಟೇ ಇವರ ಜ್ಞಾನದ ದಾಸೋಹದ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದೆ. ಇವರಿಗೆ ಪ್ರೀತಿಪೂರ್ವಕ ಅಭಿನಂದನೆಗಳು.

-ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾಲ್ಲೂಕು

Tags:
error: Content is protected !!