ಆಂದೋಲನ ದಿನ ಪತ್ರಿಕೆಯ ಭಾನುವಾರದ ಸಂಚಿಕೆಯನ್ನು ನೋಡಿ ಸಂತೋಷವಾಯಿತು. ಪತ್ರಿಕೆಯು ೫೩ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪತ್ರಿಕೆ ಬಗ್ಗೆ ಪ್ರತಿಯೊಬ್ಬರ ಅಭಿಮಾನದ ಮಾತುಗಳನ್ನು ಕೇಳಿ ಸಾರ್ಥಕವೆನಿಸಿತು.
ಪತ್ರಿಕೆಯ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ಸಿಕ್ಕ ಮೊಬೈಲನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿ ಕತೆಯನ್ನು ಮೆರೆದಿದ್ದಾರೆ. ಇದು ಮೆಚ್ಚುವಂಥ ವಿಚಾರ.
ಆಂದೋಲನ ಯಾವುದೇ ವಿಷಯವನ್ನಾದರೂ ಅಂಜಿಕೆ ಇಲ್ಲದೆ ನಿಷ್ಟುರವಾದರೂ ಸತ್ಯವನ್ನೇ ಹೇಳುತ್ತದೆ. ಅನೇಕ ಪ್ರತಿಭೆಗಳನ್ನು ಪರಿಚಯಿಸಿ ಅವರಿಗೆ ಮತ್ತಷ್ಟು ಪ್ರೋತ್ಸಾಹಗಳನ್ನು ತುಂಬಿದೆ. ಹಲವಾರು ಲೇಖಕರನ್ನು ಬೆಳೆಸಿದ ಹೆಗ್ಗಳಿಕೆ ಆಂದೋಲನ ಪತ್ರಿಕೆಗೆ ಇದೆ.
ಎಲ್ಲರನ್ನೂ ಸೆಳೆಯುವ ಮಾಂತ್ರಿಕ ಶಕ್ತಿ ಈ ಪತ್ರಿಕೆಯಲ್ಲಿ ಅಡಗಿದೆ. ಆಂದೋಲನ ಎತ್ತರವಾಗಿ ಬೆಳೆಯುತ್ತಾ ಎಲ್ಲರ ವಿಶ್ವಾಸ ಗಳಿಸುತ್ತಿದೆ. ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗದವರ ಕಾರ್ಯನಿಷ್ಠೆ, ಪರಿಶ್ರಮವನ್ನು ಮೆಚ್ಚಲೇಬೇಕು. ಮುಂದೆಯೂ ಪತ್ರಿಕೆ ಮನ್ನಣೆ ಗಳಿಸಲಿ. ಪತ್ರಿಕೆಯನ್ನು ಬೆಳೆಸಲು ಸಹಕರಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.
– ಎಂ. ಎಸ್. ಉಷಾ ಪ್ರಕಾಶ್, ಎಸ್. ಬಿ.ಎಂ.ಕಾಲೋನಿ, ಮೈಸೂರು





