ಜನವರಿ ೩೦, ಸರ್ವೋದಯ ದಿನ.
‘ಸರ್ವೋದಯ ಗರ್ವೋದಯ,
ಯುಗ ಮಂತ್ರ’ (ಕುವೆಂಪು).
ಇಂದು ಆ ಮಂತ್ರ ಅತಂತ್ರ; ಬದಲು ಗರ್ವೋದಯ ಕುತಂತ್ರ:
ಅಽಕಾರ ಲಾಲಸೆ ಸರ್ವತ್ರ;
‘ಅಹಂ’ ಅಮಲು ಎಲ್ಲೆಲ್ಲೂ! (ಅದೂ ಘಮಲು ಕೂಡ).
‘ಸಿರಿ’: ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವರು ಉಟ್ಟ ಸೀರೆಯತ್ತ
ಪತ್ರಿಕೆಗಳ ಕಣ್ಣು; ಕಳಕಳಿ (ಬಜೆಟ್ ಎಂಟು, ಸೀರೆ ಎಂಟು)! ಸೀರೆಯನ್ನು
ಕಟ್ಟಿಕೊಂಡೇನು, ಮುಖ್ಯವಾದುದು(ಬಜೆಟ್‌ನ) ‘ಸಿರಿ’ಯಲ್ಲವೆ?
-ಸಿಪಿಕೆ, ಮೈಸೂರು





