Mysore
23
few clouds

Social Media

ಶನಿವಾರ, 28 ಮಾರ್ಚ್ 2026
Light
Dark

ಓದುಗರ ಪತ್ರ; ವಯೋಮಿತಿ ಸಡಿಲಿಕೆ ಸ್ವಾಗತಾರ್ಹ

ಓದುಗರ ಪತ್ರ

ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ ನಿರ್ಧಾರ ರಾಜದ್ಯಂತ ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸರ್ಕಾರ ಒತ್ತಾಯಕ್ಕೆ ಮಣಿದು, ಈ ಹಿಂದೆ ತಾನು ಮಾಡಿದ ನಿರ್ಣಯದಂತೆ ಒಂದು ವರ್ಷ ಇದ್ದ ವಯೋಮಿತಿಯನ್ನು ಆರು ವರ್ಷದಿಂದ ಅರವತ್ತು ದಿನಗಳು, ಅಂದರೆ ಈ ಹಿಂದಿನಂತೆಯೇ ೫ ವರ್ಷ ಮತ್ತು ಹತ್ತು ತಿಂಗಳಿಗೆ ಶೈಕ್ಷಣಿಕ ವರ್ಷ ೨೦೨೬-೨೭ರಿಂದಲೇ ಅನ್ವಯವಾಗುವಂತೆ ಸಡಿಲಿಸಿರುವ ನಡೆ ಸ್ವಾಗತಾರ್ಹ. ಸಾಮಾನ್ಯವಾಗಿ ಪೋಷಕರು ಎಲ್‌ಕೆಜಿಗೆ ಸೇರಿಸುವಾಗಲೇ ವಯೋಮಿತಿ ಬಗ್ಗೆ ತಲೆಕಡಿಸಿಕೊಳ್ಳದೇ ನಂತರ ಒಂದನೇ ತರಗತಿಗೆ ಬಂದಾಗ ಪರಿತಪಿಸುವಂತಾಗುತ್ತಿದ್ದು, ಈ ನಿಟ್ಟಿನಲ್ಲಿಯೂ ಸರ್ಕಾರ ಒಂದು ತಿದ್ದುಪಡಿ ಕಾಯಿದೆಯ ಮೂಲಕ ಎಲ್‌ಕೆಜಿ ಪ್ರವೇ ಶಾತಿಗೆ ಮೂರು ವರ್ಷ ಹತ್ತು ತಿಂಗಳೆಂದು ಪರಿಗಣಿಸುವಂತೆ ಮಾಡುತ್ತಿರುವುದಾಗಿ ಶಿಕ್ಷಣ ಸಚಿವರು ಹೇಳಿzರೆ. ಈ ನಿರ್ಧಾರ ಉತ್ತಮವಾದುದು. ಇದರಿಂದಾಗಿ ಎಲ್‌ಕೆಜಿಗೆ ಸೇರಿಸುವಾಗಲೇ ಪೋಷಕರು ಸೂಕ್ತ ನಿರ್ಧಾರ ಕೈಗೊಂಡು ಮುಂದೆ ಮುಜುಗರಕ್ಕೀಡಾಗುವ ಪರಿಸ್ಥಿತಿ ತಪ್ಪಿಸಬಹುದಾಗಿದೆ.

– ವಿಜಯ್ ಹೆಮ್ಮಿಗೆ, ಮೈಸೂರು 

Tags:
error: Content is protected !!