ಮಡಿಕೇರಿ ನಗರವನ್ನು ಸ್ವಚ್ಛವಾಗಿಡಲು ಎಷ್ಟೇ ಪ್ರಯತ್ನಿಸಿದರೂ ಕೆಲವರಿಂದ ನಗರದ ಅಂದ ಕೆಡುತ್ತಿದೆ. ಕಸ ಸಂಗ್ರಹಕ್ಕೆ ಮನೆಮನೆಗೆ ನಗರಸಭೆ ವತಿಯಿಂದ ವಾಹನ ಬರುತ್ತಿದೆ.
ಜೊತೆಗೆ ಕಸ ಎಸೆಯುವ ಕೆಲ ಪ್ರದೇಶಗಳಲ್ಲಿ ನಗರಸಭೆ ವತಿಯಿಂದ ಸಿಸಿ ಕ್ಯಾಮೆರಾ ಅಳವಡಿಸಿ ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ನಗರದ ಹೊಸ ಬಡಾವಣೆ ಬಳಿ ರಸ್ತೆ ಬದಿಯೇ ಕಸ ತಂದು ಸುರಿಯಲಾಗುತ್ತಿದ್ದು, ಶ್ವಾನ, ಜಾನುವಾರುಗಳು ಕಸವನ್ನು ಎಳೆದುಹಾಕುತ್ತಿವೆ. ನಗರಸಭೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ಅರುಣ್ ಕುಮಾರ್, ಮಡಿಕೇರಿ





