ಮಾಧ್ಯಮವೊಂದರ ವರದಿಯ ಪ್ರಕಾರ ಆನ್‌ಲೈನ್ ಮಾರುಕಟ್ಟೆಗಳ ಭರಾಟೆಯಿಂದಾಗಿ ಸರ್ಕಾರಿ ಸ್ವಾಮ್ಯದ ಹಾಪ್ ಕಾಮ್ಸ್ ಮಳಿಗೆಗಳು ನಷ್ಟಕ್ಕೆ ಸಿಲುಕಿದ್ದು, ಅವು ಮುಚ್ಚುವ ಹಂತಕ್ಕೆ ತಲುಪಿವೆ ಎನ್ನಲಾಗಿದೆ.
ಸರ್ಕಾರ ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡಿ ಖರೀದಿಸಿ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಪೂರೈಕೆ ಮಾಡಲು ಹಾಪ್‌ಕಾಮ್ಸ್ ಮಳಿಗೆಗಳನ್ನು ಸ್ಥಾಪಿಸಿದೆ. 1965ರಲ್ಲಿ 26 ಶಾಖೆಗಳೊಂದಿಗೆ ಆರಂಭಗೊಂಡ ಹಾಪ್ ಕಾಮ್ಸ್ ಬೆಂಗಳೂರು, ಬೆಳಗಾವಿ, ಗದಗ, ಧಾರವಾಡ ಮತ್ತು ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿಗೂ ಗುಣಮಟ್ಟದ ಕೃಷಿ ಉತ್ಪನ್ನಗಳು ಪೂರೈಕೆ ಮಾಡುತ್ತಿದೆ. ಸದ್ಯ ರಾಜ್ಯಾದ್ಯಂತ ಇರುವ 600 ಹಾಟ್ ಕಾಮ್ಸ್ ಮಳಿಗೆಗಳ ಪೈಕಿ 140 ಮಳಿಗೆಗಳನ್ನು ಮುಚ್ಚಲಾಗಿದೆಯಂತೆ. ಆನ್‌ಲೈನ್ ಹೊಡೆತದಲ್ಲಿ ಸಣ್ಣಪುಟ್ಟ ಗಿರಾಣಿ ಅಂಗಡಿಗಳು ಮುಚ್ಚುತ್ತಿರುವುದು ಸಾಮಾನ್ಯವಾಗಿರುವಾಗ ಈ ಸಾಲಿಗೆ ಹಾಪ್‌ಕಾಮ್ಸ್ ಮಳಿಗೆಗಳೂ ಸೇರುತ್ತಿರುವುದು ವಿಪರ್ಯಾಸ, ಹಾಪ್‌ಕಾಮ್ಸ್‌ಗಳ ಉಳಿವಿಗಾಗಿ ಸರ್ಕಾರ ಕ್ರಮಕೈಗೊಳ್ಳಬೇಕು.
ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.