ಸ್ವಾಗತಾರ್ಹ ನಡೆ!
ಜಾತಿ ಮೀರಿ ಪ್ರೀತಿಸಿದರೆ
ಕುಂದಲ್ಲವದು ಮರ್ಯಾದೆಗೆ
ಬದಲಿಗೆ ಹೆಚ್ಚುವುದು
ಮರ್ಯಾದೆ ಗೌರವ!
ಜಾತಿ ಕಟ್ಟಳೆ ಮುರಿವ
ಸಮತೆಯ ಸಂದೇಶ ಸಾರುವ
ಸಂಜೀವಿನಿಯದು ಪ್ರೀತಿ!
ಜಾತಿ ಮೀರದೆ ನಾವಾಗುವುದಿಲ್ಲ
ನಿಜದಲಿ ಮನುಜರು!
ಮರ್ಯಾದೆಗೇಡು ಹತ್ಯೆ ತಡೆಯಲು
ಸರ್ಕಾರ ಮಸೂದೆ ತರುತ್ತಿರುವುದು
ಸ್ವಾಗತಾರ್ಹ ನಡೆ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ಮೈಸೂರು-೩೦



