Mysore
26
scattered clouds

Social Media

ಬುಧವಾರ, 14 ಜನವರಿ 2026
Light
Dark

ಓದುಗರ ಪತ್ರ: ಪ್ರವಾಸಿಗರನ್ನು ಸೆಳೆದ ಫಲಪುಷ್ಪ ಪ್ರದರ್ಶನ

ಓದುಗರ ಪತ್ರ

ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಫಲಪುಷ್ಪ ಪ್ರದರ್ಶನದಲ್ಲಿ ಕಣ್ಮನ ಸೆಳೆಯುವಂತೆ ಪಕ್ಷಿಗಳು, ಪ್ರಾಣಿಗಳು ಹಾಗೂ ಮಹನೀಯರ ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ಹಲವು ಬಗೆಯ ೧೨ ಲಕ್ಷಕ್ಕೂ ಅಽಕ ಹೂಗಳನ್ನು ಬಳಸಲಾಗಿದೆ. ಸುಮಾರು ೨೫ ಸಾವಿರ ಕುಂಡಗಳಲ್ಲಿ ಬಣ್ಣ ಬಣ್ಣದ ಹೂವುಗಳು ನಳನಳಿಸುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ. ಡೇಲಿಯ, ಸೇವಂತಿಗೆ, ಕಾಶಿಗೊಂಡೆ, ಸಿಲ್ವಿಯ ಮುಂತಾದ ವೈವಿಧ್ಯಮಯ ಗಿಡಗಳಿವೆ. ಹೂವನ್ನು ಬಳಸಿ ನಿರ್ಮಿಸಿರುವ ನವಿಲುಗಳು ಪ್ರವಾಸಿಗರಿಗೆ ಸ್ವಾಗತ ಕೋರುತ್ತಿರುವುದು ಮನಸೂರೆಗೊಳಿಸುತ್ತದೆ. ಅಲ್ಲದೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯ, ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಾದ ಅಕ್ಷರಧಾಮ, ಕಾರ್ಗಿಲ್ ಯುದ್ಧದ ಸ್ಮಾರಕ, ಪಂಚ ಗ್ಯಾರಂಟಿ ಯೋಜನೆಗಳು, ಮುಮ್ಮಡಿ ಕೃಷ್ಣರಾಜ ಒಡೆಯರ್, ಸಂವಿಧಾನದ ಪೀಠಿಕೆ, ಗಂಡ ಭೇರುಂಡ, ಆಮೆ, ಹದ್ದು ಹೀಗೆ ಇನ್ನೂ ಅನೇಕ ಆಕೃತಿಗಳು ಹೂವುಗಳಲ್ಲಿ ಮೂಡಿಬಂದಿದ್ದು, ಅತ್ಯಾಕರ್ಷಣೀಯವಾಗಿವೆ. ಪ್ರವಾಸಿಗರಿಗೆ ಅವುಗಳೊಂದಿಗೆ ಫೋಟೋ ತೆಗೆದುಕೊಳ್ಳಲು ಅವಕಾಶವನ್ನು ನೀಡಲಾಗಿದೆ. ರಾತ್ರಿಯ ವೇಳೆ ವಿದ್ಯುತ್ ದೀಪಾಲಂಕಾರವೂ ಇರುವುದರಿಂದ ಫಲಪುಷ್ಪ ಪ್ರದರ್ಶನವು ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

-ಎನ್.ಪಿ.ಪರಶಿವಮೂರ್ತಿ, ನಂಜೀಪುರ, ಸರಗೂರು ತಾ.

Tags:
error: Content is protected !!