Mysore
28
broken clouds

Social Media

ಬುಧವಾರ, 28 ಜನವರಿ 2026
Light
Dark

ಓದುಗರ ಪತ್ರ: ಕನ್ನಡಿಗರ  ಅಸ್ಮಿತೆ ಇನಾದರೂ ಅರಳಬಹುದೇ?

ಓದುಗರ ಪತ್ರ

ಕನ್ನಡಿಗರ  ಅಸ್ಮಿತೆ ಇನಾದರೂ ಅರಳಬಹುದೇ?

ಅಂತಾರಾಷ್ಟ್ರೀಯ ಟೆಕ್ ದೈತ್ಯ ‘ಗೂಗಲ್’ ಬೆಂಗಳೂರಿನಲ್ಲಿ ಕಚೇರಿ ತೆರೆಯುತ್ತಿದ್ದು, ಕ್ಯಾಂಪಸ್ಸಿಗೆ ‘ಅನಂತ’ ಎಂದು ಹೆಸರಿಡುವ ಜತೆಗೆ ಸಭಾಂಗಣಕ್ಕೆ ‘ಸಭಾ’ ಮತ್ತು ಕ್ಯಾಂಪಸ್ಸಿನಲ್ಲಿ ನಿರ್ಮಿಸಿರುವ ಕಿರುಕಾನನಕ್ಕೆ ‘ಅರಣ್ಯ’ ಎಂದು ಹೆಸರಿಟ್ಟಿದೆ.

ಇತ್ತೀಚಿನ ವರ್ಷಗಳಲ್ಲಿ ಅನ್ಯಭಾಷಿಗರ ಹಾವಳಿಯಿಂದಾಗಿ ಬೆಂಗಳೂರಿನಲ್ಲಿ ಕನ್ನಡವೇ ಮರೆಯಾಗುತ್ತಿದೆ. ಕನ್ನಡಿಗರೂ ಕೂಡ ಕನ್ನಡ ಮಾತನಾಡಲು ಹಿಂಜರಿಯುತ್ತಾರೆ. ಅಲ್ಲದೆ ಕೆಲವರು ತಮ್ಮ ಮನೆ, ವ್ಯವಹಾರ, ಕಚೇರಿ, ಅಪಾರ್ಟ್‌ಮೆಂಟ್, ಮಾಲ್ಗಳಲ್ಲಿ ಇಂಗ್ಲಿಷ್‌ನಲ್ಲೇ ವ್ಯವಹರಿಸುವುದು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಹೋಗಿದೆ. ಇಲ್ಲಿಗೆ ಬಂದು ದುಡಿಯುವ, ಇಲ್ಲಿಯೇ ಜೀವನ ಸಾಗಿಸುತ್ತಿರುವ ಅನ್ಯಭಾಷಿಗರು ಕನ್ನಡವನ್ನು ನಿಕೃಷ್ಟವಾಗಿ ನೋಡುತ್ತಿದ್ದಾರೆ.ಅಂತಹವರ ನಡುವೆ ಗೂಗಲ್ ಬೆಂಗಳೂರಿನ ಕ್ಯಾಂಪಸ್‌ಗೆ ಕನ್ನಡದಲ್ಲಿ ಹೆಸರಿಡುವ ಮೂಲಕ ಕನ್ನಡದ ಬಗ್ಗೆ ಅರಿವು ಮೂಡಿಸಿ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.

ಕನ್ನಡಿಗರಲ್ಲಿ ಕನ್ನಡ ಭಾಷಾ ಮತ್ತು ಸಂಸ್ಕೃತಿಯ ಅಸ್ಮಿತೆಯನ್ನುಅರಳಿಸಲು ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಮತ್ತೊಂದು ಅಸ್ತ್ರಬೇಕಿಲ್ಲ. ಗೂಗಲ್ ಕನ್ನಡದ ಬಗೆಗಿನ ಈ ಔದಾರ್ಯ ಮತ್ತು ಪ್ರೇಮವನ್ನು ಉದ್ಯೋಗಿಗಳ ನೇಮಕಾತಿಯಲ್ಲೂ ತೋರಿಸಲಿ.

-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.

Tags:
error: Content is protected !!