Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಓದುಗರ ಪತ್ರ: ರಸ್ತೆ ಡಾಂಬರೀಕರಣ ಮಾಡಿ

dgp murder case

ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಕ್ಯಾತನಹಳ್ಳಿ ಗ್ರಾಮದಿಂದ ಸಿಂಗರಮಾರನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಜನರು ಗುಂಡಿ ಬಿದ್ದ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ರಸ್ತೆಯು ಐದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಸಿಂಗರಮಾರನಹಳ್ಳಿಯವರೆಗೆ ಮಾತ್ರ ಹದಗೆಟ್ಟು ಹೋಗಿದ್ದು, ಉಳಿದ ಭಾಗಗಳಲ್ಲಿ ಡಾಂಬರೀಕರಣ ಮಾಡಲಾಗಿದೆ.

ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು, ವಾಹನಗಳು ಸಂಚರಿಸಿದಂತೆಲ್ಲ ವಿಪರೀತ ದೂಳು ಆವರಿಸುತ್ತಿದೆ. ಅಲ್ಲದೆ, ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಅನೇಕ ಬಾರಿ ಗುಂಡಿ ತಪ್ಪಿಸಲುಹೋಗಿ ಅಪಘಾತವಾಗಿರುವ ಉದಾಹರಣೆಗಳಿವೆ. ಇನ್ನು ಮಳೆಗಾಲ ಬಂತೂ ಎಂದರೆ ಈ ರಸ್ತೆ ಸಂಪೂರ್ಣವಾಗಿ ಕೆಸರಿನ ಗದ್ದೆಯಂತಾಗಲಿದೆ. ಈ ವೇಳೆ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹರ ಸಾಹಸ ಪಡಬೇಕಾಗುತ್ತದೆ.

ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ಡಾಂಬರೀಕರಣ ಮಾಡಬೇಕಿದೆ.

-ಎಂ.ದರ್ಶಿನಿ, ಸಿಂಗರಮಾರನಹಳ್ಳಿ, ಎಚ್.ಡಿ.ಕೋಟೆ ತಾ.

Tags:
error: Content is protected !!