Mysore
20
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕೋಟೆ: ಮರಗಳ ಹನನಕ್ಕೆ ಸಿದ್ಧತೆ!

ತಾಪಂ ಆವರಣದ 6 ಮರ ಕಟಾವಿಗೆ ಮುಂದಾದ ಅರಣ್ಯ ಇಲಾಖೆ
13 ಮರಗಳ ತೆರವಿಗೆ ಅರಣ್ಯ ಇಲಾಖೆಗೆ ತಾಪಂ ಅಧಿಕಾರಿಗಳು ಪತ್ರ
ಅರಣ್ಯಾಧಿಕಾರಿಗಳ ನಿರ್ಧಾರಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ

ಮಂಜು ಕೋಟೆ

ಎಚ್.ಡಿ.ಕೋಟೆ: ಪಟ್ಟಣದ ಕೇಂದ್ರ ಪ್ರದೇಶದಲ್ಲಿರುವ ಅನೇಕ ಮರಗಳ ತೆರವಿಗೆ ಇದೀಗ ಅಧಿಕಾರಿಗಳೇ ಮುಂದಾಗಿರುವುದು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ಈ ಹಿಂದೆ ಇದ್ದ ಅಧಿಕಾರಿಗಳು ಅನೇಕ ಸರ್ಕಾರಿ ಕಚೇರಿಗಳ ಆವರಣದಲ್ಲಿ ವಿವಿಧ ಜಾತಿಗಳ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಇದರಿಂದ ಪರಿಸರಕ್ಕೆ ಪೂರಕವಾದ ವಾತಾವರಣ ಉಂಟಾಗಿದೆ. ಗ್ರಾಮೀಣ ಪ್ರದೇಶದಿಂದ ಆಗಮಿಸುವ ಸಾರ್ವಜನಿಕರು ನೆರಳಿನ ಆಸರೆ ಪಡೆದುಕೊಳ್ಳಲು ಇದು ನೆರವಾಗಿದೆ.

ಆದರೆ, ಇತ್ತೀಚೆಗೆ ಇಂತಹ ಮರಗಳ ಹನನ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಪಟ್ಟಣದ ತಾಪಂ ಕಚೇರಿಯ ಮುಂಭಾಗದಲ್ಲಿರುವ 13 ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಪಂ ಅಧಿಕಾರಿಗಳು ಪತ್ರ ಬರೆದಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ ಪೂಜಾ ಅವರು ಇತ್ತೀಚೆಗೆ ಪರಿಶೀಲನೆ ನಡೆಸಿ, 13 ಮರಗಳು ಹಳೆಯ ದಾಗಿವೆ. ಈ ಮರಗಳಿಂದ ಕಟಡಕೆ ಹಾನಿಯಾಗಲಿದೆ ಎಂದು ತಿಳಿಸಿ, ಸದ್ಯಕ್ಕೆ ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ.

ತಾಪಂ ಕಚೇರಿ ಎದುರು ಇರುವ ಮರಗಳನ್ನು ಕಡಿಯಲಿರುವ ವಿಚಾರ ತಿಳಿದುಪರಿಸರಪ್ರೇಮಿಗಳುಮತ್ತುಪ್ರಜ್ಞಾವಂತರು ಆಕ್ರೋಶಗೊಂಡಿದ್ದಾರೆ. ಅತ್ಯುತ್ತಮವಾದ ಪರಿಸರ ಹೊಂದಿರುವ ಮರಗಳನ್ನು ಕಡಿಯಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಸರ್ಕಾರಿ ಕಚೇರಿಗಳ ಆವರಣದಲ್ಲಿ ಮರ ಕಡಿದರೆ ಕೆಲಸ ಕಾರ್ಯಗಳಿಗೆ ಹಳ್ಳಿಗಳಿಂದ ಆಗಮಿಸುವ ಸಾರ್ವಜನಿಕರಿಗೆ ನೆರಳೂ ಇಲ್ಲದಂತಾಗುತ್ತದೆ. ಈಗಾಗಲೇ ಆಡಳಿತ ಸೌಧದ ಮುಂಭಾಗದಲ್ಲಿದ್ದ ಮರಗಳ ತೆರವು ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ.
ವನಸಿರಿ ಶಂಕರ್‌, ಪರಿಸರ ಪ್ರೇಮಿ

ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿರುವ 13 ಮರಗಳನ್ನು ಕಡಿದು ಹಾಕುವಂತೆ ತಿಳಿಸಿದ್ದರು. ನಾನು ಮತ್ತು ಮೇಲಧಿಕಾರಿಗಳು ಸ್ಥಳ ಪರಿಶೀಲಿಸಿ 6 ಮರಗಳನ್ನು ಮಾತ್ರ ಕಡಿಯಲು ಟೆಂಡರ್ ಕರೆಯಲು ಕ್ರಮ ವಹಿಸಿದ್ದೇವೆ.
-ಪೂಜಾ, ಅರಣ್ಯ ಅಧಿಕಾರಿ

ಎಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಹಳೆಯ ಮರಗಳು ಹಾಗೂ ಕಚೇರಿಯ ಕಟ್ಟಡ ಮತ್ತು ಸನಿಹದ ಮನೆಗಳ ಮೇಲೆ ಚಾಚಿ ಕೊಂಡಿರುವ ಮರಗಳ ತೆರವಿಗೆ
ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಕಡಿಯಲಿರುವ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.
-ಧರಣೇಶ್, ಇಒ, ತಾಪಂ

Tags:
error: Content is protected !!