Mysore
29
haze

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕಲುಷಿತ ನೀರು ಕಾವೇರಿ ನದಿ ಸೇರುವುದನ್ನು ತಡೆಯಲು ಯೋಜನೆ

ಮೈಸೂರು ನಗರದಲ್ಲಿ 32 ಕಿ.ಮೀ. ಉದ್ದದ ನೂತನ ಯುಜಿಡಿ ಮಾರ್ಗ; 1,500 ಮ್ಯಾನ್‌ಹೋಲ್‌ಗಳ ನಿರ್ಮಾಣ

ಮೈಸೂರು ನಗರದ ಯುಜಿಡಿ ಮಾರ್ಗ ಉನ್ನತೀಕರಣಕ್ಕೆ 80 ಕೋಟಿ ರೂ. ವೆಚ್ಚದ ಡಿಪಿಆರ್‌ಗೆ ಸರ್ಕಾರ ಅನುಮೋದನೆ

ಕೆ.ಬಿ.ರಮೇಶನಾಯಕ
ಮೈಸೂರು: ಹಲವು ವರ್ಷಗಳಿಂದ ಮಳೆ ನೀರು, ಚರಂಡಿಯ ಕಲುಷಿತ ನೀರು ಕಾವೇರಿ ನದಿಗೆ ಸೇರುತ್ತಿರುವುದನ್ನು ತಡೆಯಲು ಒಳಚರಂಡಿ ವ್ಯವಸ್ಥೆಯನ್ನು ಉನ್ನತೀಕರಿಸುವ ವಿಸ್ತ್ರತ ಯೋಜನಾ ವರದಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶವನ್ನು ಪಾಲಿ ಸಲು ಮುಂದಾಗಿರುವ ರಾಜ್ಯ
ಸರ್ಕಾರ ಮೈಸೂರು ನಗರಪಾಲಿಕೆಗೆ 80 ಕೋಟಿ ರೂ. ಅನುದಾನ ನೀಡಿದ್ದು, ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಿದೆ. ಇದರಿಂದಾಗಿ ನರಸಿಂಹರಾಜ, ಚಾಮರಾಜ ಕ್ಷೇತ್ರಗಳ ಕೆಲವು ಭಾಗಗಳಿಂದ ಕಾವೇರಿ ನದಿನಾಲೆಗೆ ಸೇರುತ್ತಿದ್ದ ಮಳೆ ನೀರು ಚರಂಡಿ ಕಲುಷಿತ ನೀರನ್ನು ತಡೆಯುವಂತಹ ಯೋಜನೆಯಿಂದ ಮುಂದೆ ಸಮಸ್ಯೆ ತಪ್ಪಿದಂತಾಗಲಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಸರೆಯ ಎಸ್‌ ಟಿಎಫ್ ಘಟಕಕ್ಕೆ ಸೇರಬೇಕಿದ್ದ ನೀರು ಕಾವೇರಿ ನದಿಗೆ ನೇರವಾಗಿ ಸೇರುತ್ತಿದ್ದುದನ್ನು ತಡೆಯಬೇಕಾದ ಅನಿವಾರ್ಯತೆ ಯಲ್ಲಿದ್ದ ನಗರಪಾಲಿಕೆಗೆ ಈ ಯೋಜನೆಯಿಂದ ಆಸರೆ ಸಿಕ್ಕಂತಾಗಿದೆ.

ಬೆಂಗಳೂರು ನಂತರದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರ ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದೆ. ಆದರೆ, ಮೈಸೂರು ಅರಸರ ಆಡಳಿತದಲ್ಲಿ ನಿರ್ಮಾಣಗೊಂಡಿದ್ದ ಹಳೆಯ ಬಡಾವಣೆ ಗಳಲ್ಲಿ ಜನಸಂಖ್ಯೆ, ಮನೆಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕುಡಿಯುವ ನೀರಿನ ವ್ಯವಸ್ಥೆ ಒಳಚರಂಡಿಯ ಮೇಲೆ ಒತ್ತಡ ಬೀಳುತ್ತಿದೆ.

ನರಸಿಂಹರಾಜ ಕ್ಷೇತ್ರದ ಕ್ಷೇತ್ರದ ಕೆಲವು ಪ್ರದೇಶಗಳು ಕಿರಿ ದಾಗಿದ್ದರಿಂದ ಒಳಚರಂಡಿ ಮಾರ್ಗ ಹಾಳಾಗಿ ಕಲುಷಿತ ನೀರು ಮಳೆಯ ನೀರಿ ನೊಂದಿಗೆ ಸೇರಿ ಕಾವೇರಿ ನದಿಯ ನಾಲೆಗಳಿಗೆ ಸೇರುತ್ತಿತ್ತು. ಕೆಲವು ಪ್ರದೇಶಗಳಲ್ಲಂತೂ ಮಳೆ ಬಂದಾಗ ಯುಜಿಡಿ ನೀರು ಮ್ಯಾನ್‌ಹೋಲ್‌ನಲ್ಲಿ ಉಕ್ಕಿ ಹರಿದು ಸಾರ್ವಜನಿಕರು ಮೂಗುಮುಚ್ಚಿಕೊಂಡು ಓಡಾಡುವಂತಹ ಸನ್ನಿವೇಶ ನಿರ್ಮಾಣವಾಗುತ್ತಿತ್ತು. ಹೀಗಾಗಿ, ನಗರ ಮತ್ತು ಪಟ್ಟಣಗಳಲ್ಲಿ ಕೊಳಚೆ ನೀರಿನ ಉತ್ಪಾದನೆ ಮತ್ತು ಅದರ ಸಂಸ್ಕರಣೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ, ಉನ್ನತೀಕರಣ, ಒಳಚರಂಡಿ ಸಂಸ್ಕರಣಾ ಘಟಕಗಳ ದುರಸ್ತಿ, ಗೃಹಸೇವಾ ಸಂಪರ್ಕಗಳನ್ನು ಒದಗಿಸುವುದಕ್ಕೆ ಕ್ರಮಕೈಗೊಳ್ಳು ವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರ ಆಧಾರದ ಮೇಲೆ 30 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಆಯ್ದ 110 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಒಂದು ಲಕ್ಷಕ್ಕಿಂತ
ಹೆಚ್ಚು ಜನಸಂಖ್ಯೆ ಹೊಂದಿರುವ 20 ನಗರ ಹೆಚ್ಚು ಜನಸಂಖ್ಯೆ ಹೊಂದಿರುವ 20 ನಗರಗಳನ್ನು ಸೇರಿಸಿ 1,518 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ತಕ್ಕಂತೆ ಮೈಸೂರು ನಗರಕ್ಕೆ 80 ಕೋಟಿ ರೂ.ಗಳ ಅನುದಾನದ ಪ್ರಸ್ತಾಪಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ ಈ ಯೋಜನೆಯ ಹೊಣೆ ಹೊತ್ತಿದೆ.

32 ಕಿ.ಮೀ. ಉದ್ದದ ಮಾರ್ಗ: ಮೈಸೂರು ನಗರದಲ್ಲಿ 32 ಕಿ.ಮೀ. ಉದ್ದದ ಯುಜಿಡಿ ಲೈನ್ ಉನ್ನತೀಕರಣವಾಗಲಿದ್ದು, ಹಳೆಯ ಪ್ರದೇಶಗಳ ಯುಜಿಡಿ ನೀರು ನೇರವಾಗಿ ಘನತ್ಯಾಜ್ಯ ನೀರು ನಿರ್ವಹಣಾ ಘಟಕಕ್ಕೆ ಸೇರುವಂತೆ ಪ್ಲಾನ್ ಮಾಡಲಾಗಿದೆ.

ಅದರಂತೆ ಶೋಭಾ ಗಾರ್ಡನ್, ಸುಭಾಷ್ ನಗರದ ಉಸ್ಥಾನಿಯಾ ಬ್ಲಾಕ್, ಕ್ರಿಶ್ಚಿಯನ್ ಲೇಔಟ್, ಕೈಫ್ ಮಸ್ಟಿವ್, ನಿಮ್ರಾ ಮಸ್ಟಿದ್, ಶಬನಮ್ ಫಂಕ್ಷನ್ ಹಾಲ್, ಶೇಷಾದ್ರಿಪುರಂ ಕಾಲೇಜು, ರಾಯಲ್ ಎನ್‌ಫೀಲ್ಡ್, ಕೆಆ‌ಎಸ್ ರಸ್ತೆಯ ರಾಯಲ್ ಇನ್ ಜಂಕ್ಷನ್, ಬನ್ನಿಮಂಟಪದ ಜೋಡಿ ತೆಂಗಿನಮರ, ಟಿಪ್ಪು ಸರ್ಕಲ್, ಪುಲಿಕೇಶಿ ರಸ್ತೆ, ಬಿ.ಬಿ. ಕೇರಿ, ಮೈಸೂರು-ಬೆಂಗಳೂರು ರಸ್ತೆ ಶ್ರೀನಿವಾಸ ಚಿತ್ರಮಂದಿರ ಈ ಪ್ರದೇಶಗಳ ಯುಜಿಡಿ ನೀರು ನೇರವಾಗಿ ಕೆಸರೆಯಲ್ಲಿರುವ ಎಸ್ ಟಿಪಿ ಘಟಕಕ್ಕೆ ಸೇರುವಂತೆ ಮಾಡುವುದು. ಅದೇ ರೀತಿ ಮೈಸೂರು-ನಂಜನ ಗೂಡು ರಸ್ತೆಯ ಗುಂಡೂರಾವ್‌ನಗರ, ಭೈರವೇಶ್ವರನಗರದಿಂದ ವಿದ್ಯಾರಣ್ಯಪುರಂ ಬಡಾವಣೆಗಳ ಮಲೀನ ನೀರು ಸಂಸ್ಕರಣಾ ಘಟಕಕ್ಕೆ ಹರಿದುಹೋಗುವಂತೆ ಮಾಡಿ ದಳವಾಯಿ ಕೆರೆಗೆ ಸೇರುವುದನ್ನು ತಡೆಗಟ್ಟಲು ಪ್ಲಾನ್ ಮಾಡಲಾಗಿದೆ. ಯುಜಿಡಿ ಮಾರ್ಗದ ನಿರ್ಮಾಣದ ಜತೆಗೆ 1ರಿಂದ 6 ಅಡಿ ಅಳದ ಮ್ಯಾನ್‌ಹೋಲ್ (ಯಂತ್ರಗುಂಡಿ) ನಿರ್ಮಿಸಲಾಗುತ್ತದೆ. ಇದರಿಂದ ಯಾವುದೇ ಸಂದರ್ಭದಲ್ಲಿ ಎಷ್ಟೇ ನೀರಿನ ಒತ್ತಡ ಉಂಟಾಗಿ ಮ್ಯಾನ್‌ಹೋಲ್‌ನಿಂದ ನೀರು ಉಕ್ಕಿ ಹರಿಯುವುದು ತಪ್ಪುತ್ತದೆ. ಅಲ್ಲದೆ ಈ ನೀರು ಮಳೆ ನೀರು ಚರಂಡಿಗೆ ಸೇರಲು ಅವಕಾಶ ಇರುವುದಿಲ್ಲ.

ಶೀಘ್ರದಲ್ಲೇ ಕಾಮಗಾರಿ ಶುರು: ಈಗಾಗಲೇ ಯೋಜನೆಯನ್ನು ಅಮೃತ್ ಕನ್ಸಲ್ವೆಂಟ್‌ಗೆ ವಹಿಸಿದ್ದು, ಅಧೀಕ್ಷಕ ಅಭಿಯಂತರರ ಸಮ್ಮುಖದಲ್ಲಿ ಒಂದು ಸಭೆ ನಡೆಸಲಾಗಿದೆ. ಎಲ್ಲೆಲ್ಲಿ ಒಳಚರಂಡಿ ಮಾರ್ಗಕ್ಕೆ ಜಾಗ ಅಗತ್ಯವಿದೆಯೋ ಅದನ್ನು ಸ್ವಾಧೀನಪಡಿಸಿಕೊಂಡು ಹಸ್ತಾಂತರಿಸಲಾಗುತ್ತದೆ. ಒಟ್ಟು ಹನ್ನೊಂದು ಕಾಮಗಾರಿ ಪೂರ್ಣಗೊಳಿಸುವ ಗಳನ್ನು ಒಂದು ವರ್ಷದೊಳಗೆಲಾಗಿದೆ.

ಮೈಸೂರು ನಗರದ ಯುಜಿಡಿ ವ್ಯವಸ್ಥೆಯನ್ನು ಉನ್ನತೀಕರಿಸಿ ಕಾವೇರಿ ನದಿ, ನಾಲೆಗಳಿಗೆ ಕಲುಷಿತ ನೀರು ಸೇರುವುದನ್ನು ತಡೆಯಲು 80 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಯೋಜನೆ ಶುರುವಾಗಲಿದೆ. ನರಸಿಂಹರಾಜ ಕ್ಷೇತ್ರದ ಬಹುಪಾಲು ಯುಜಿಡಿ ಸಮಸ್ಯೆ ನಿವಾರಣೆಯಾಗಲಿದೆ. -ಎ.ಎಂ.ಮೊಹಮ್ಮದ್ ಮುಸ್ತಫಾ, ಸಹಾಯಕ ಕಾರ್ಯಪಾಲಕ ಅಭಿಯಂತರ, ಮೈಸೂರು ನಗರಪಾಲಿಕೆ ಒಳಚರಂಡಿ ವಿಭಾಗ,

 

Tags:
error: Content is protected !!