Mysore
27
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಜಾ.ದಳ ಮುಖಂಡ ಕೃಷ್ಣನಾಯಕ ವಿರುದ್ಧ ಭುಗಿಲೆದ್ದ ಆಕ್ರೋಶ

ಮಂಜು ಕೋಟೆ

ಕೋಟೆ: ನಾಯಕ ಸಮುದಾಯದ ಮುಖಂಡರ ಸಭೆಗೆ ಮಾಜಿ ಶಾಸಕ ಚಿಕ್ಕಣ್ಣ, ಮತ್ತಿತರರನ್ನು ಆಹ್ವಾನಿಸದ ಆರೋಪ 

ಎಚ್.ಡಿ.ಕೋಟೆ: ಜಾ.ದಳಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡಿರುವ ಕೆ.ಎಂ.ಕೃಷ್ಣನಾಯಕ ಅವರು ನಡೆಸಿದ ಜಾ.ದಳದ ನಾಯಕ ಸಮು ದಾಯದ ಮುಖಂಡರು, ಕಾರ್ಯ ಕರ್ತರ ಸಭೆಗೆ ಪಕ್ಷದ ತಾಲ್ಲೂಕಿನ ನಾಯಕಸಮುದಾಯದ ಪ್ರಭಾವಿ ಮುಖಂಡರನ್ನು ನಿರ್ಲಕ್ಷಿಸಿದ್ದಾರೆ ಎಂಬ ಆಕ್ರೋಶ ಸಮುದಾಯದವರಲ್ಲಿ ಹಾಗೂ ಜಾ.ದಳದಲ್ಲಿ ವ್ಯಕ್ತವಾಗುತ್ತಿದೆ.

ಜಾ.ದಳಕ್ಕೆ ಅಧಿಕೃತವಾಗಿ ಮರಳಿ ಸೇರ್ಪಡೆಗೊಂಡ ನಂತರ ಕೃಷ್ಣನಾಯಕ ಭಾನುವಾರ ಜಾ.ದಳದ ಅಧ್ಯಕ್ಷರಾದ ರಾಜೇಂದ್ರ ಮತ್ತು ಗೋಪಾಲಸ್ವಾಮಿ ಸಮ್ಮುಖದಲ್ಲಿ ನಾಯಕ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸಿದ್ದರು. ಆದರೆ ತಾಲ್ಲೂಕಿನಲ್ಲಿರುವ ಪಕ್ಷದ ಪ್ರಮುಖರಾದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ. ದೊಡ್ಡನಾಯಕ, ಜಯಪ್ರಕಾಶ್ ಚಿಕ್ಕಣ್ಣ, ಪುರಸಭಾ ಅಧ್ಯಕ್ಷರಾದ ಶಿವಮ್ಮ ಚಾಕ ಹಳ್ಳಿ ಕೃಷ್ಣ, ಮತ್ತಿತರರನ್ನು ಆಹ್ವಾನಿಸದೆ ಮತ್ತು ವಿಚಾರ ತಿಳಿಸದೆ ಸಭೆ ನಡೆಸಿರುವುದು ಜಾ.ದಳ ಕಾರ್ಯಕರ್ತರು ಮತ್ತು ಮುಖಂಡರು ಅಸಮಾಧಾನಕ್ಕೆ ಕಾರಣವಾಗಿದೆ.

ಪಕ್ಷಕ್ಕೆ ಸೇರ್ಪಡೆಗೊಂಡ ನಂತರವೂ ಕೃಷ್ಣ ನಾಯಕ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಮತ್ತು ಮುಂಬರುವ ಚುನಾವಣೆಗಳನ್ನು ಎದುರಿಸುವ ವಿಚಾರವಾಗಿ ಪಕ್ಷದಮುಖಂಡರ ಜೊತೆ ಚರ್ಚಿಸದೆ ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಂಡು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದ್ದಾರೆ.

ನಾಯಕ ಸಮುದಾಯದ ಪಕ್ಷದ ಪ್ರಭಾವಿ ನಾಯಕರುಗಳನ್ನೇ ದೂರ ಮಾಡಿಕೊಂಡು ಪಕ್ಷದ ಸಂಘಟನೆಯನ್ನು ಹಾಗೂ ಮುಂಬರುವ ಚುನಾವಣೆಗಳನ್ನು ಹೇಗೆ ಎದುರಿಸುತ್ತಾರೆ ಎಂಬ ಆತಂಕ ಮುಖಂಡರು, ಕಾರ್ಯಕರ್ತರಲ್ಲಿ ಮೂಡಿದೆ.

ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು ಜಾ.ದಳದಲ್ಲಿ ಮತ್ತು ತಾಲ್ಲೂಕಿನಲ್ಲಿ ತಮ್ಮದೇ ಆದ ಶಕ್ತಿ ಮತ್ತು ಪ್ರಭಾವಿ ನಾಯಕತ್ವವನ್ನು ಹೊಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಂಟಾ ಗುವ ಅಸಮಾಧಾನದ ಸೋಟದಿಂದ ಪಕ್ಷಕ್ಕೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇವೆ. ಈ ಹಿನ್ನೆಲೆಯಲ್ಲಿ ಜಾ.ದಳ ಜಿಲ್ಲಾ ವರಿಷ್ಠರಾದ ಸಾ.ರಾ.ಮಹೇಶ್, ಜಿ.ಡಿ.ಹರೀಶ್‌ಗೌಡ, ಸಿ.ಎನ್.ಮಂಜೇಗೌಡ, ನರಸಿಂಹಸ್ವಾಮಿ ಮತ್ತಿತರರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ತಾಲ್ಲೂಕಿನ ಜನರಲ್ಲಿ ಕುತೂಹಲ ಮೂಡಿಸಿದೆ.

” ಜಾ.ದಳ ನಾಯಕ ಸಮುದಾಯದ ಮುಖಂಡರು, ಕಾರ್ಯಕರ್ತರ ಸಭೆಗೆ ನನ್ನನ್ನಾಗಲಿ, ಬೇರೆಯವರನ್ನಾಗಲಿಕರೆದಿಲ್ಲ. ಈ ಕುರಿತು ವಿಚಾರವನ್ನೂ ತಿಳಿಸುತ್ತಿಲ್ಲ. ಇವರ ನಡವಳಿಕೆಯನ್ನು ನಾನು ಮತ್ತು ಇನ್ನಿತರರು ಸಹಿಸುವುದಿಲ್ಲ. ಇಲ್ಲಿಯವರೆಗೂ ತಾಲ್ಲೂಕಿನಲ್ಲಿ ಸ್ವಾಭಿಮಾನದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು, ಮುಖಂಡರು, ಸ್ನೇಹಿತರು, ಹಿತೈಷಿಗಳ ಸಭೆ ನಡೆಸಿ ಅತ್ಯುತ್ತಮವಾದ ತೀರ್ಮಾನ ತೆಗೆದುಕೊಳ್ಳುತ್ತೇವೆ.”

-ಬೀಚನಹಳ್ಳಿ ಚಿಕ್ಕಣ್ಣ, ಮಾಜಿ ಶಾಸಕರು.

Tags:
error: Content is protected !!