Mysore
27
few clouds

Social Media

ಶನಿವಾರ, 10 ಜನವರಿ 2026
Light
Dark

ವಿವೇಕಾನಂದ ಉದ್ಯಾನದ ‘ರೈಲೆ ಕೋಚ್ ಕೆಫೆ’ಗೆ ವಿರೋಧ

ಉದ್ಯಾನಗಳಲ್ಲಿ ಕ್ಯಾಂಟೀನ್‌ ಸ್ಥಾಪಿಸಿದರೆ ಹೋರಾಟ ತ್ರೀವ್ರಗೊಳಿಸುವ ಎಚ್ಚರಿಕೆ

ಸಾಲೋಮನ್
ಮೈಸೂರು: ನಗರದ ಯಾದವಗಿರಿಯ ವಿವೇಕಾನಂದ ಉದ್ಯಾನದಲ್ಲಿ ‘ರೈಲ್ವೆ ಕೋಚ್ ಕೆಫೆ’ ಸ್ಥಾಪಿಸಲು ನೈಋತ್ಯ ರೈಲ್ವೆ ಮುಂದಾಗಿರುವುದು ಹಳೆಯ ಸಂಗತಿ. ಈ ಕುರಿತು ಸಾಮಾಜಿಕ ಹೋರಾಟಗಾರರು ಪ್ರತಿರೋಧ ವ್ಯಕ್ತಪಡಿಸಿದ ಕಾರಣ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಉದ್ಯಾನ ಗಳಲ್ಲಿ ಕ್ಯಾಂಟೀನ್‌ಗಳನ್ನು ಸ್ಥಾಪಿಸಿದರೆ ಹೋರಾಟ ತೀವ್ರ ಗೊಳಿಸುವುದಾಗಿ ಸಾಮಾಜಿಕ ಹೋರಾಟಗಾರರು ಮತ್ತೆ ಎಚ್ಚರಿಸಿದ್ದಾರೆ.

ಈಗಾಗಲೇ ಭಾರತೀಯ ರೈಲ್ವೆ ದೇಶದಾದ್ಯಂತ ಇಂತಹ ೭೦ ರೈಲ್ವೆ ಕೋಚ್ ಕೆಫೆಗಳನ್ನು ಹೊಂದಿದ್ದು, ವ್ಯಾಪಾರ ಹಾಗೂ ಸಾರ್ವಜನಿಕರ ಬೆಂಬಲವೂ ದೊರಕಿದೆ ಎಂಬುದು ರೈಲ್ವೆ ಇಲಾಖೆಯವರ ವಾದ. ಅದೇ ರೀತಿ ಮೈಸೂರು ನಗರದಲ್ಲೂ ರೈಲ್ವೆ ಕೋಚ್ ಕೆಫೆ ಆರಂಭಿಸಲು ಎರಡು ಕಡೆಗಳಲ್ಲಿ ಸ್ಥಳ ಗುರುತಿಸಿದೆ. ಕೇಂದ್ರ ರೈಲ್ವೆ ನಿಲ್ದಾಣ ಹಾಗೂ ಯಾದವಗಿರಿಯ ವಿವೇಕಾನಂದ ಉದ್ಯಾನಗಳಲ್ಲಿ ರೈಲ್ವೆ ಕೋಚ್ ಕೆ- ನಿರ್ಮಿಸಲು ತೀರ್ಮಾನಿಸಿ ಟೆಂಡರ್ ಕೂಡ ನೀಡಲಾಗಿದೆ.

ರೈಲ್ವೆ ಮ್ಯೂಸಿಯಂನಲ್ಲಿ ಕೆಫೆಟೇರಿಯವನ್ನಾಗಿ ರೈಲಿನ ಬೋಗಿ, ಕಂಪಾರ್ಟ್‌ಮೆಂಟ್ ಅನ್ನು ರೆಸ್ಟೋರೆಂಟ್ ಬಳಕೆ ಗಾಗಿ ನೀಡಲಾಗುತ್ತಿದೆ. ಈ ಬೋಗಿಗಳನ್ನು ಗುತ್ತಿಗೆಗೆ ಪಡೆದವರು ಅಭಿವೃದ್ಧಿಪಡಿಸಿಕೊಂಡು, ಅದರ ರೆಸ್ಟೋರೆಂಟ್ ಆರಂಭಿಸಬೇಕಿದೆ.

ಸದ್ಯ ಯಾದವಗಿರಿಯ ಸ್ವಾಮಿವಿವೇಕಾನಂದ ಉದ್ಯಾನದ ರೈಲ್ವೆಗೆ ಸೇರಿದ ಜಾಗದಲ್ಲಿ ಕೆಫೆ ಆರಂಭಿಸಲು ಉದ್ದೇಶಿಸಿದ್ದು, ಈಗಾಗಲೇ ಉದ್ಯಾನವನದ ಬೇಲಿಯನ್ನು ಹಿಂದಕ್ಕೆ ಒತ್ತರಿಸಿ ಅದರ ಮುಂಭಾಗದಲ್ಲಿ ರೈಲ್ವೆ ಹಳಿಯನ್ನು ಅಳವಡಿಸಲಾಗಿದೆ. ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ನೈಋತ್ಯ ರೈಲ್ವೆ ಮೈಸೂರು ವಿಭಾಗವು ಉದ್ಯಾನದಲ್ಲಿ ‘ರೈಲ್ವೆ ಕೋಚ್ ಕೆಫೆ’ಗೆ ಟೆಂಡರ್ ನೀಡಿದೆ. ಐದು ವರ್ಷಗಳ ಅವಧಿಗೆ ಪಾರ್ಕ್ ಪ್ರದೇಶದ ಐಸಿಎಫ್ ಬ್ರಾಡ್‌ಗೇಜ್ ಪ್ಯಾಸೆಂಜರ್ ಟ್ರೈನ್ ಕೋಚ್ ಒಳಗೆ ಹವಾನಿಯಂತ್ರಿತ ಮಲ್ಟಿ-ಕ್ಯುಸನ್ ‘ರೈಲ್ ಕೋಚ್ ರೆಸ್ಟೋರೆಂಟ್’ ಸ್ಥಾಪನೆ, ಮರು ಫರ್ನಿಶಿಂಗ್, ನಿರ್ವಹಣೆ ಮತ್ತು ಕಾರ್ಯಾಚರಣೆ ಗಾಗಿ ಒಪ್ಪಂದ ಮಾಡಲಾಗಿದೆ. ಈಗಾಗಲೆ ಬಿಡ್ ಮಾಡಿ ಒಪ್ಪಂದವೂ ಆಗಿದೆ.

ವಾಹನ ಸಂಚಾರಕ್ಕೆ ಸಮಸ್ಯೆ: ವಿವೇಕಾನಂದ ಉದ್ಯಾನದಲ್ಲಿ ‘ರೈಲ್ವೆ ಕೋಚ್ ಕೆ-’ ಆರಂಭಿಸುವುದಾದರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಈ ಭಾಗದಲ್ಲಿ ಗೊಂದಲ, ಗದ್ದಲ ಉಂಟಾಗಬಹುದು. ಇದರ ಪರಿಹಾರಕ್ಕಾಗಿ ಸಮೀಪದಲ್ಲೇ ಇರುವ ರೈಲ್ವೆ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡುವುದಾಗಿ ರೈಲ್ವೆ ವಾಣಿಜ್ಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ನೈಋತ್ಯ ರೈಲ್ವೆ ಬಿಡ್ ದಾರರಿಗೆ ಕಂಪಾರ್ಟ್ ಮೆಂಟ್ ಸೌಕರ್ಯಗಳನ್ನು ಒದಗಿಸುತ್ತದೆ. ಬಿಡ್‌ದಾರರು ಸ್ವತಃ ಕೋಚನ್ನು ರೆಸ್ಟೋರೆಂಟ್ ಆಗಿ ಪರಿವರ್ತಿಸಿಕೊಳ್ಳಬೇಕು. ಗುತ್ತಿಗೆದಾರರ ದಾಖಲಾತಿಗಳ ಪರಿಶೀಲನೆ ನಡೆಯುತ್ತಿದೆ. ದಾಖಲೆಗಳು ಸರಿ ಇದ್ದರೆ ಮಾತ್ರ ಅವರಿಗೆ ರೆಸ್ಟೋರೆಂಟ್ ನಡೆಸಲು ಪರವಾನಗಿ ನೀಡಲಾಗುತ್ತದೆ. ಸದ್ಯ ಮೈಸೂರು ನಗರದಲ್ಲಿ ಎರಡು ಸ್ಥಳಗಳಲ್ಲಿ ಕೋಚ್ ಕೆಫೆ ಮಾಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ. -ಗಿರೀಶ್ ಧರ್ಮರಾಜ್ ಕಲಗೊಂಡ, ವಿಭಾಗೀಯ  ವಾಣಿಜ್ಯ ವ್ಯವಸ್ಥಾಪಕ, ಮೈಸೂರು ವಿಭಾಗ

Tags:
error: Content is protected !!