Mysore
15
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಓದುಗರ ಪತ್ರ: ವಿಪಕ್ಷಗಳ ಆರೋಪ ರಾಜಕೀಯ ಪ್ರೇರಿತ

ಓದುಗರ ಪತ್ರ

ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕ ರಾಜ್ಯ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಗಳ ನಡುವೆಯೇ, ತಲಾ ಆದಾಯದಲ್ಲಿ ಕರ್ನಾಟಕ ರಾಜ್ಯ ೨೦೨೪-೨೫ನೇ ವಿತ್ತೀಯ ವರ್ಷದಲ್ಲಿ ದೇಶದ ಉಳಿದ ಎಲ್ಲಾ ರಾಜ್ಯಗಳನ್ನು ಮೀರಿಸಿದೆ ಎಂಬ ವಿಚಾರವನ್ನು ಲೋಕಸಭೆಯಲ್ಲಿ ಮಂಡಿಸಲಾಗಿರುವ ಕೇಂದ್ರ ಹಣಕಾಸು ಇಲಾಖೆಯ ಅಂಕಿ ಅಂಶಗಳು ಸ್ಪಷ್ಟಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಜ್ಯ ಸರ್ಕಾರದ ತಲಾ ಆದಾಯ  ಒಟ್ಟಾರೆ ರಾಜ್ಯ ಆಂತರಿಕ ಉತ್ಪನ್ನವು (ಎನ್‌ಎಸ್ ಡಿಪಿ) ರೂ.೨,೦೪,೬೦೫.೦೦ಗೆ ತಲುಪಿದ್ದು, ೨೦೧೪-೧೫ ರಲ್ಲಿದ್ದ ರೂ. ೧,೦೫,೬೯೭ ಮೀರಿಸಿ, ಶೇ. ೯೩.೬ ರಷ್ಟು ಬೆಳವಣಿಗೆ ಕಂಡಿದೆ. ಈ ರೀತಿ ರಾಜ್ಯದ ಜನರ ಆದಾಯವು ಗಣನೀಯವಾಗಿ ಏರಿಕೆ ಕಂಡಿರುವುದನ್ನು ಕೇಂದ್ರ ಸರ್ಕಾರದ ವಿತ್ತ ಸಚಿವಾಲಯವೇ ಹೇಳಿದೆ. ಕಳೆದ ಒಂದು ದಶಕದಲ್ಲಿ ರಾಜ್ಯದ ಆದಾಯವು ಬಹುತೇಕ ದ್ವಿಗುಣ ಗೊಂಡಿದೆಯೆಂದು ವಿತ್ತ ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರ್ಥಿಕ ಆರೋಗ್ಯದ ಬಗ್ಗೆ ವಿರೋಧ ಪಕ್ಷಗಳ ಟೀಕೆ-ಟಿಪ್ಪಣಿಗಳು ವಸ್ತು ನಿಷ್ಠವಾಗಿರದೇ ರಾಜಕೀಯ ಪ್ರೇರಿತವಾಗಿವೆ ಎಂದು ಭಾವಿಸಬಹುದಾಗಿದೆ.

– ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

Tags:
error: Content is protected !!