Mysore
23
few clouds

Social Media

ಶುಕ್ರವಾರ, 09 ಜನವರಿ 2026
Light
Dark

ಓದುಗರ ಪತ್ರ: ನಟ್ಟು -ಬೋಲ್ಟು ಭಾಷೆ ಸಲ್ಲದು

ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,  ಸಮಾರಂಭಕ್ಕೆ ಚಲನಚಿತ್ರೋದ್ಯಮದ ಹಲವು ಪ್ರಮುಖರೇ ಗೈರಾಗಿರುವ ಕುರಿತು ಕೋಪದಿಂದಲೇ ಮಾತನಾಡಿರುವುದು ಸರಿಯಷ್ಟೇ. ಆದರೆ,  ಚಿತ್ರರಂಗದ ಕುರಿತು ಮಾತನಾಡುವಾಗ  ನಟ್ಟು-ಬೋಲ್ಟು ಪದ ಬಳಕೆ ಮಾಡಿರುವುದು ಅಷ್ಟು ಸೂಕ್ತವಲ್ಲ ಅನಿಸುತ್ತದೆ.

ಕನ್ನಡ ಚಲನಚಿತ್ರರಂಗ ಸಂಕಷ್ಟದಲ್ಲಿದ್ದಾಗ ಸರ್ಕಾರ ಸಾಕಷ್ಟು ಬಾರಿ ನೆರವು ನೀಡಿದೆ. ಕನ್ನಡ ಚಲನಚಿತ್ರರಂಗದ ಬೆಳವಣಿಗೆಗೆ ಸಹಾಯಸ್ತ ಚಾಚಿದೆ. ಅಲ್ಲದೆ ಚಿತ್ರರಂಗಕ್ಕೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಚಿತ್ರೋದ್ಯಮ ಸಂಕಷ್ಟದಲ್ಲಿದ್ದಾಗ ಒಟ್ಟಾಗಿ ಬಂದು ಸರ್ಕಾರದ ಬಳಿ ನೆರವು ಕೇಳುವ ಚಿತ್ರರಂಗದ ದಿಗ್ಗಜರೆಲ್ಲರು, ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ  ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರಾಗಿರುವುದು ಬೇಸರ   ತರಿಸುವ ಸಂಗತಿ. ಈ ಹಿಂದೆ ಡಾ.ರಾಜ್‌ಕುಮಾರ್ ಅವರು ಕನ್ನಡ ನಾಡು,  ನುಡಿಯ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಕನ್ನಡ ಪರ ಚಳವಳಿಗಳಲ್ಲಿ ಸರ್ಕಾರದೊಂದಿಗೆ ಕೈಜೋಡಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಸರ್ಕಾರದ ಸಹಾಯಧನ ಬೇಕು, ಕನ್ನಡ ಚಲನ ಚಿತ್ರಗಳಿಗೆ ಸಬ್ಸಿಡಿ ಬೇಕು, ಸರ್ಕಾರದ ವತಿಯಿಂದ ಫಿಲಂ ಸಿಟಿ ನಿರ್ಮಾಣವಾಗಬೇಕೇ ಹೊರತು , ಸರ್ಕಾರ ಆಯೋಜಿಸುವ ಕಾರ್ಯಕ್ರಮ,  ಕನ ಡ ಹೋರಾಟಗಳ ಪರ ಚಿತ್ರರಂಗ ನಿಲ್ಲುತ್ತಿಲ್ಲ. ಕನ ಡ ಚಿತ್ರೋದ್ಯಮ ಬೆಳೆದಿರುವುದೇ ಸರ್ಕಾರದ ನೆರವಿನಿಂದ ಹಾಗೂ ಚಿತ್ರ ರಸಿಕರ ಪ್ರೀತಿಯಿಂದ.  ಈ ಸತ್ಯವನ್ನು ಕನ ಡ ಚಿತ್ರೋದ್ಯಮದ ಎಲ್ಲರೂ ನೆನಪಿಟ್ಟುಕೊಂಡು ಕನ್ನಡ ನಾಡು, ನುಡಿ ಹಾಗೂ ಕನ್ನಡ  ಚಿತ್ರರಂಗದ  ಬೆಳವಣಿಗೆಗೆ  ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಡಿಕೆಶಿಯವರು ಕೋಪಗೊಂಡಿದ್ದರಲ್ಲಿ ಅರ್ಥವಿದೆ. ಆದರೆ ನಟ್ಟು-ಬೋಲ್ಟು ಪದ ಬಳಕೆ ಸಲ್ಲದು.

 -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

Tags:
error: Content is protected !!